ಇಂದಿನ ದಿನಗಳಲ್ಲಿ ಜನರು ಮೋಜು ,ಮಸ್ತಿಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಹೆಸರನ್ನು ಪಡೆಯುವುದಾಕ್ಕಾಗಿ ಏನನ್ನು ಬೇಕಾದರೂ ಮಾಡುತ್ತಾರೆ. ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಯುವಕನೋರ್ವ ಸೋಶಿಯಲ್ ವಿಡಿಯಾದಲ್ಲಿ ಪ್ರಸಿದ್ಧಿ ಪಡೆಯಲೆಂದು 10 ರೂ.ಗಳ ನೋಡುಗಳನ್ನು ಸೇತುವೆ ಮೇಲಿಂದು ಸುರಿದ್ದನು.
ಅಂತಹದ್ದೆ ಘಟನೆಯ ವಿಡಿಯೋವೊಂದು ವೈರಲ್ ಆಗ್ತಿದೆ.
ಗುಜರಾತಿನ ಮೆಹ್ಸಾನಾದಲ್ಲಿ ಯುವಕಯೋರ್ವ ಮನೆಯ ಮೇಲ್ಛಾವಣಿಯಿಂದ 500 ಮತ್ತು 100 ರೂ.ಗಳ ನೋಟುಗಳನ್ನು ಎಸೆದಿದ್ದು, ಅದನ್ನು ಸಂಗ್ರಹಿಸಲು ಮನೆಯಕೆಳಗೆ ಅಪಾರ ಸಂಖ್ಯೆಯ ಜನರು ಜಮಾಯಿಸಿದ್ದ ವಿಡಿಯೋ ವೈರಲ್ ಆಗ್ತಿದೆ.
ಮಾಹಿತಿಯ ಪ್ರಕಾರ, ಗುಜರಾತ್‌ನ ಮೆಹ್ಸಾನಾದಲ್ಲಿ ಮಾಜಿ ಸರಪಂಚ್ ತನ್ನ ಸೋದರಳಿಯನ ಮದುವೆಯ ದಿನ ನೋಡುಗಳನ್ನು ಮನೆಯ ಮೇಲಿಂದ ಕೆಳಗೆ ಸುರಿದ್ದಾನೆ. ಅದನ್ನು ಸಂಗ್ರಹಿಸಲು ಅಪಾರ ಸಂಖ್ಯೆಯ ಜನರು ಮನೆಯ ಕೆಳಗೆ ಜಮಾಯಿಸಿದ್ದರು. ಇದೇ ವೇಳೆ ನೋಟುಗಳನ್ನು ಸಂಗ್ರಹಿಸುವಾಗ ಜನರ ನಡುವೆ ಮಾತಿನ ಚಕಮಕಿಯೂ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.