ಹುಬ್ಬಳ್ಳಿ: ಯುವಕನೋರ್ವನನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳ ಗುಂಪೊಂದು ಕೊಚ್ಚಿ ಕೊಲೆ ಮಾಡಿರುವಂತ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ.
ಹುಬ್ಬಳ್ಳಿಯ ನೇಕಾರ ನಗರದ ಸಂತೋಷ ಕಾಲೋನಿಯಲ್ಲಿ ಜನತೆಯೇ ಬೆಚ್ಚಿ ಬೀಳುವಂತ ಘಟನೆ ನಡೆದಿದೆ.
ಇಂದು ಆಟೋದಲ್ಲಿ ಬಂದಂತ ನಾಲ್ಕೈದು ದುಷ್ಕರ್ಮಿಗಳ ಗುಂಪೊಂದು ನಾಗರಾಜ ಚಲವಾದಿ ಎಂಬ ಯುವಕನ ಕಣ್ಣಿಗೆ ಕಾರದ ಪುಡಿಯನ್ನು ಎರಚಿದ್ದಾರೆ. ಈ ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.
ಇನ್ನೂ ನಾಗರಾಜ ಚಲವಾದಿ ಜೊತೆಗೆ ಇದ್ದಂತ ಸ್ನೇಹಿತರ ಮೇಲೂ ಲಾಂಗ್ ಬೀಸಿದ್ದಾರೆ. ಆದ್ರೇ ಅವರೆಲ್ಲರೂ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಕಾರಣ, ನಾಗರಾಜ ಚಲವಾದಿ ತೀವ್ರ ರಕ್ತಸ್ತ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗರಾಜ ಚಲವಾದಿ ಹತ್ಯೆಗೆ ನಿಖಕರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಆದ್ರೇ ಕೊಲೆಗೆ ಆಸ್ತಿ ವಿಚಾರ ಹಾಗೂ ಹಳೇ ವೈಷಮ್ಯ ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ತನಿಖೆಯಿಂದ ಸ್ಪಷ್ಟ ಮಾಹಿತಿ ತಿಳಿದು ಬರಬೇಕಿದೆ.