ಬೆಂಗಳೂರು: ರಾಜ್ಯದಲ್ಲಿ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಸಮರ ತಾರಕಕ್ಕೇರಿದೆ. ರೋಹಿಣಿ ಸಿಂಧೂರಿಯವರು ಶಾಸಕ ಸಾರಾ ಮಹೇಶ್ ಬಳಿಯಲ್ಲಿ ಸಂಧಾನಕ್ಕೆ ತೆರಳಿದ ವಿಷಯ ಇದೇ ಮೊದಲು ಎಂದಿರುವಂತ ಐಪಿಎಸ್ ಅಧಿಕಾರಿ ರೂಪಾ ಡಿ ಅವರು, ನಾನು ಹಾಕಿರೋ ಪೋಟೋಗಳು ಕೇವಲ ಸ್ಯಾಂಪಲ್ ಅಷ್ಟೇ.
ಇದರಲ್ಲಿ ನನ್ನ ಯಾವುದೇ ವೈಯಕ್ತಿಕ ವಿಚಾರ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಡಿ. ರೂಪಾ ಆರೋಪಕ್ಕೆ ತಿರುಗೇಟು ನೀಡಿರುವ ರೋಹಿಣಿ ಸಿಂಧೂರಿ ವಾಟ್ಸಪ್ ಸ್ಟೇಟಸ್ ಗಳಲ್ಲಿ ಹಾಕಿದ್ದ ಫೋಟೋಗಳನ್ನು ಬಳಸಿ ರೂಪಾ ನಿಂದನೆ ಮಾಡಿದ್ದಾರೆ. ನಾನು ಯಾವ ಅಧಿಕಾರಿಗೆ ಫೋಟೋ ಕಳುಹಿಸಿದ್ದೆ ಅಂತ ಹೆಸರು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದ್ದಾರೆ. ಆ ಬಗ್ಗೆ ತನಿಖೆ ನಡೆಯಬೇಕೆಂದು ರೋಹಿಣಿ ಸಿಂಧೂರಿ ಒತ್ತಾಯಿಸಿದ್ದಾರೆ.
ಜವಾಬ್ದಾರಿ ಸ್ಥಾನದಲ್ಲಿರುವ ಇಂತಹ ಮಹಿಳೆ ವೈಯಕ್ತಿಕ ದ್ವೇಷಕಾರಿವುದು ಸಮಾಜಕ್ಕೆ ಅಪಾಯಕಾರಿ. ನನ್ನ ಮೇಲೆ ವೈಯಕ್ತಿಕ ಹಗೆ ಸಾಧಿಸಲು ರೂಪಾಗೆ ಅಭ್ಯಾಸ ಆಗಿದೆ.
ಆಧಾರರಹಿತ ಆರೋಪಗಳ ಮೂಲಕ ಗಮನಸೆಳೆಯುವುದಕ್ಕೆ ರೂಪಾ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ತೇಜೋವಧೆ, ಮಾನಹಾನಿ, ಪ್ರಕರಣಗಳಡಿ ಸಕ್ಷಮ ಪ್ರಾಧಿಕಾರದ ಮುಂದೆ ದೂರು ಸಲ್ಲಿಸುತ್ತೇವೆ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ನನ್ನ ತೇಜೋವಧೆಗೆ ಯತ್ನ ಮಾಡುತ್ತಿದ್ದಾರೆ. ರೂಪಾ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆ. ನನ್ನ ಫೋಟೋ ಯಾರಿಗೆ ಕಳುಹಿಸಿದ್ದೇನೆ ಹೇಳಲಿ ಎಂದು ಹೇಳಿದ್ದಾರೆ.