Breaking News

ರೋಹಿಣಿ ಸಿಂಧೂರಿ ಅವರ ಕೆಲ ಖಾಸಗಿ ಫೋಟೋಗಳನ್ನು ವೈರಲ್ ಮಾಡಿರುವ ಡಿ.ರೂಪಾ

Spread the love

ಬೆಂಗಳೂರು: ರಾಜ್ಯದಲ್ಲಿ ಮಹಿಳಾ ಐಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ನಡುವೆ ಸಮರ ಆರಂಭವಾಗಿದೆ. ರೋಹಿಣಿ ಸಿಂಧೂರಿ ಅವರ ಕೆಲ ಖಾಸಗಿ ಫೋಟೋಗಳನ್ನು ವೈರಲ್ ಮಾಡಿರುವ ಡಿ.ರೂಪಾ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ರೋಹಿಣಿ ಸಿಂಧೂರಿ ತಮ್ಮ ಕೆಲ ಖಾಸಗಿ ಫೋಟೋಗಳನ್ನು ಪುರುಷ ಐಎ ಎಸ್ ಅಧಿಕಾರಿಗಳಿಗೆ ಪದೇ ಪದೇ ಕಳುಹಿಸುತ್ತಿದ್ದಾರೆ. ಮಹಿಳಾ ಐಎ ಎಸ್ ಅಧಿಕಾರಿ ಪುರುಷ ಅಧಿಕಾರಿಗಳಿಗೆ ಇಂತಹ ಫೋಟೋ ಕೌಹಿಸುವುದರ ಅರ್ಥವೇನು? ಎಂದು ಕಿಡಿಕಾರಿರುವ ಡಿ.ರೂಪಾ, ರೋಹಿಣಿ ಅವರ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಶಾಸಕರ ವಿರುದ್ಧ ರೋಹಿಣಿ ಸಿಂಧೂರಿ ಆರೋಪಗಳನ್ನು ಮಾಡುತ್ತಾರೆ. ಸಿಂಧೂರಿಯವರ ನಾವೆಲ್ಲರೂ ಬೆಂಬಲಿಸಿದ್ದೆವು. ಈಗ ಅವರು ಅದೇ ಶಾಸಕರ ಜೊತೆ ರಾಜಿ ಸಂಧಾನಕ್ಕೆ ಹೋಗಿದ್ದಾರೆ. ಆರೋಪ ಮಾಡಿದ ಮೇಲೆ ಅವರೊಂದಿಗೆ ಸಂಧಾನ ಮಾಡಿಕೊಳ್ಳುವ ಅಗತ್ಯವೇನಿತ್ತು? ರೋಹಿಣಿ ಭ್ರಷ್ಟಾಚಾರ ಮಾಡಿದ್ದಾರಾ? ಕರ್ತವ್ಯಲೋಪವೆಸಗಿದ್ದಾರಾ? ತಪ್ಪು ಮಾಡಿಲ್ಲ ಎಂದ ಮೇಲೆ ರಾಜಿ ಸಂಧಾನ ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಕೆಲ ದಿನಗಳಿಂದ ಮೂವರು ಪುರಷ ಐಎ ಎಸ್ ಅಧಿಕಾರಿಗಳಿಗೆ ರೋಹಿಣಿ ತಮ್ಮ ಖಾಸಗಿ ಫೋಟೋಗಳನ್ನು ಕಳುಹಿಸುತ್ತಿದ್ದಾರೆ. ಅದರ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಈ ಫೋಟೋಗಳು ನಾರ್ಮಲ್ ಅನ್ನಿಸಬಹುದು. ಆದರೆ ಐಎ ಎಸ್ ಸರ್ವಿಸ್ ಕಂಡಕ್ಟ್ ರೂಲ್ಸ್ ಪ್ರಕಾರ ಅಪರಾಧ. ಒನ್ ಟು ಒನ್ ಹಲವು ಫೋಟೋ ಕಳುಹಿಸಿದ್ದಾರೆ. ಇದರರ್ಥ ಏನು? ಓರ್ವ ಮಹಿಳೆ ಪುರುಷ ಅಧಿಕಾರಿಗೆ ಈ ರೀತಿ ಫೋಟೋ ಕಳುಹಿಸುವುದರ ಉದ್ದೇಶವೇನು? ರೋಹಿಣಿ ನಡವಳಿಕೆ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಈಗಾಗಲೇ ನಾನು ರೋಹಿಣಿ ವಿರುದ್ಧ ಮಾಡಿರುವ 19 ಆರೋಪಗಳ ಬಗ್ಗೆಯೂ ದಾಖಲೆಗಳಿವೆ. ನೋಡೋಣ ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ? ತನಿಖೆಯನ್ನು ನಡೆಸುತ್ತಾರಾ ಎಂಬುದನ್ನು ಕಾದು ನೋಡೋಣ ಎಂದು ಗುಡುಗಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿ ವಿವಿಧ ಬೆಳೆಗಳ ಬಿತ್ತನೆ ನಡೆಯುತ್ತಿದ್ದು, ರಾಸಾಯನಿಕ ಗೊಬ್ಬರದ ಬೇಡಿಕೆ ಹೆಚ್ಚಿದೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ

Spread the loveಮೈಸೂರು: ಪ್ರಸಕ್ತ ಸಾಲಿಗೆ ರಾಸಾಯನಿಕ ಗೊಬ್ಬರದ ಕೊರತೆಯಿಲ್ಲ. ಆದರೆ, ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಯೂರಿಯಾ ಪೂರೈಕೆಯನ್ನು ಶೇ.50ರಷ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ