Breaking News

ಎಂ. ಕೆ. ಹುಬ್ಬಳ್ಳಿ| ಅನುಮಾನಾಸ್ಪದವಾಗಿ ಸಾವಿಗೀಡಾದ ಹಸುವಿನ ಮೇಲೆ ‘A’ ಗುರುತು

Spread the love

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕ, ಮಲಪ್ರಭಾ ನದಿಗೆ ತೆರಳುವ ಮಾರ್ಗದಲ್ಲಿ ಗುರುವಾರ ನಸುಕಿನಲ್ಲಿ ಹಸುವೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದೆ. ಹಸುವಿನ ಕತ್ತಿನ ಕೆಳಭಾಗವನ್ನು ಕತ್ತರಿಸಿದ್ದು, ರಸ್ತೆ ಪಕ್ಕದಲ್ಲಿ ಎಸೆಯಲಾಗಿದೆ.

 

ಗುರುವಾರ ಬೆಳಿಗ್ಗೆ ವಾಯು ವಿಹಾರಿಗಳು ಇತ್ತ ಬಂದಾಗ ಹಸುವಿನ ಶವ ಪತ್ತೆಯಾಗಿದೆ. ಕೆಲವು ಜನ ಸೇರಿಕೊಂಡು ಹೆದ್ದಾರಿ ಪಕ್ಕದಲ್ಲೇ ತಗ್ಗು ತೆಗೆದು ಹೂತಿದ್ದಾರೆ. ಆದರೆ, ಗುರುವಾರ ಸಂಜೆಯವರೆಗೂ ಹಸುವಿನ ಮಾಲೀಕರು ಯಾರು ಎಂಬುದು ಗೊತ್ತಾಗಿಲ್ಲ. ಯಾರೂ ಪೊಲೀಸರಿಗೆ ದೂರು ಕೂಡ ಸಲ್ಲಿಸಿಲ್ಲ.

‘ಹಸು ಸತ್ತ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಪಿಎಸ್‌ಐ ರಾಜು ಮಮದಾಪುರ ತಿಳಿಸಿದರು.

ಹಸುವಿನ ಹೊಟ್ಟೆ ಭಾಗದಲ್ಲಿ ಕಪ್ಪು ಮಸಿಯಿಂದ ‘A’ ಎಂಬ ಅಕ್ಷರ ಬರೆಯಲಾಗಿತ್ತು. ಹಾಗಾಗಿ, ಇದು ಕಸಾಯಿ ಖಾನೆಗೆ ಸಾಗಿಸಿದ ಹಸು ಇರಬಹುದು ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಕತ್ತಿ ವಿರುದ್ಧ ಕಾನೂನು ರೀತಿಯಲ್ಲಿ ಹೋರಾಟ

Spread the loveಕತ್ತಿ ವಿರುದ್ಧ ಕಾನೂನು ರೀತಿಯಲ್ಲಿ ಹೋರಾಟ : ಹುಕ್ಕೇರಿ ವಿದ್ಯುತ್ ಸಂಘದ ಚುನಾವಣೆ ಹಾಗೂ ಡಿಸಿಸಿ ಬ್ಯಾಂಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ