Breaking News

ಬೀದಿ ದೀಪ ಅಳವಡಿಸಿ ಇಂಥ ರೀತಿಯ ಪರಿಸ್ಥಿತಿ ಕಳೆದ ಐದು ವರ್ಷಗಳಿಂದಲೂ ಇದೆ.

Spread the love

 

ಬೆಳಗಾವಿ: ಇಲ್ಲಿನ ಆದರ್ಶ ನಗರದ ಆದರ್ಶ ಶಾಲೆಯಿಂದ ಹಿಡಿದು ವಡಗಾಂವಿ (ಗ್ರಾಮೀಣ ಪೊಲೀಸ್ ಠಾಣೆ ಹಿಂಭಾಗ) ಮಾರ್ಗದಲ್ಲಿ ವಿದ್ಯುತ್‌ ಕಂಬಗಳಿವೆ. ಆದರೆ, ವಿದ್ಯುತ್‌ ದೀಪಗಳೇ ಇಲ್ಲ. ಇದರಿಂದ ಈ ಪ್ರದೇಶ ದಿನವೂ ಕತ್ತಲು ಆವರಿಸಿರುತ್ತದೆ.

ಬೆಳಗಾವಿ | ಕುಂದು ಕೊರತೆ -ರಸ್ತೆ ಉಬ್ಬು ನಿರ್ಮಿಸಿ

ಇಂಥ ರೀತಿಯ ಪರಿಸ್ಥಿತಿ ಕಳೆದ ಐದು ವರ್ಷಗಳಿಂದಲೂ ಇದೆ. ಈ ಬಗ್ಗೆ ಹಲವು ಬಾರಿ ಮಹಾನಗರ ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಆದರೂ ಯಾರೂ ಕಣ್ಣೆತ್ತಿ ನೋಡಿಲ್ಲ. ಸರ್ಕಾರದ ‘ಜನಹಿತ’ ವೆಬ್‌ಸೈಟ್‌ನಲ್ಲೂ ಅರ್ಜಿ ಸಲ್ಲಿಸಿದ್ದೇನೆ. ಬಹಳಷ್ಟು ಮನವಿ ನಂತರ ಬೀದಿ ದೀಪದ ಕಂಬಗಳನ್ನು ನೆಟ್ಟಿದ್ದಾರೆ.

ಆದರೆ, ಅವುಗಳಿಗೆ ಬಲ್ಬ್‌ ಅಳವಡಿಸಿಲ್ಲ. ಇದರಿಂದ ಹಿರಿಯರು, ಮಕ್ಕಳು, ಮಹಿಳೆಯರು ಕತ್ತಲಲ್ಲಿ ಓಡಾಡುವುದು ಕಷ್ಟವಾಗಿದೆ. ಅಪಾಯ ಸಂಭವಿಸುವ ಮುನ್ನ ಪಾಲಿಕೆ ಅಧಿಕಾರಿಗಳು ಹಾಗೂ ಹೆಸ್ಕಾಂ ಎಂಜಿನಿಯರ್‌ಗಳು ಎಚ್ಚೆತ್ತುಕೊಳ್ಳಬೇಕು. ಅಗತ್ಯದಷ್ಟು ಬೀದಿ ದೀಪ ಅಳವಡಿಸಬೇಕು.

-ಪ್ರೊ.ದತ್ತಾತ್ರೇಯ ಚೌಧರಿ, ಆದರ್ಶನ ನಗರ, ಬೆಳಗಾವಿ


Spread the love

About Laxminews 24x7

Check Also

ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿ ವರೆಗೂ ಪ್ರತಿಭಟನಾ ರ್ಯಾಲಿ. ಧರ್ಮಸ್ಥಳದ ಭಕ್ತಾಭಿಮಾನಿಗಳ ವೇದಿಕೆಯಿಂದ ಹೋರಾಟ

Spread the love ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಷಡ್ಯಂತ್ರ, ಅಪಪ್ರಚಾರ ವಿಚಾರ ಕುಂದಾನಗರಿ ಬೆಳಗಾವಿಯಲ್ಲಿ ಧರ್ಮಸ್ಥಳ ಭಕ್ತರಿಂದ ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ