Breaking News

2023: ಸ್ವಿಗ್ಗಿ ಆಹಾರ ಹೊತ್ತು ಸಾಗಲಿವೆ ಡ್ರೋನ್

Spread the love

ಬೆಂಗಳೂರು: ಸ್ವಿಗ್ಗಿ ಆಯಪ್‌ನಲ್ಲಿ ಆಹಾರ ಪೂರೈಕೆಗೆ ಆರ್ಡರ್ ಮಾಡಿದರೆ ಅದನ್ನು ಮುಂದಿನ ದಿನಗಳಲ್ಲಿ ಹೊತ್ತು ಡೆಲಿವರಿ ಬಾಯ್ ತರುವುದಿಲ್ಲ, ಬದಲಿಗೆ ಡ್ರೋನ್ ಬರಲಿದೆ!

ಹೌದು, ಆಹಾರ ಹೊತ್ತು ಬರುವ ಡ್ರೋನ್ ಈಗ ಸಿದ್ಧವಾಗಿದೆ. ಗರುಡ ಏರೋಸ್ಪೇಸ್ ಕಂಪನಿ ಅಭಿವೃದ್ಧಿಪಡಿಸಿರುವ ಡ್ರೋನ್, ಏರೋ ಇಂಡಿಯಾ-2023ರಲ್ಲಿ ಪ್ರದರ್ಶನಗೊಳ್ಳುತ್ತಿದೆ.

 

‘ಡೆಲಿವರಿ ಡ್ರೋನ್’ ಎಂದೇ ಇದಕ್ಕೆ ಹೆಸರಿಡಲಾಗಿದ್ದು, ಸದ್ಯಕ್ಕೆ 5 ಕೆ.ಜಿ ತೂಕ ಹೊರುವ ಸಾಮರ್ಥ್ಯವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ 10 ರಿಂದ 15 ಕೆ.ಜಿ ಸಾಮರ್ಥದ ಡ್ರೋನ್‌ ಅಭಿವೃದ್ಧಿಪಡಿಸುವ ಸಿದ್ಧತೆಯಲ್ಲೂ ಗರುಡ ಕಂಪನಿ ಇದೆ.

‘ಸ್ವಿಗ್ಗಿ ಜತೆಗೆ ಈ ಕಂಪನಿ ಮಾತುಕತೆ ನಡೆಸಿದ್ದು, 2 ಕಿಲೋ ಮೀಟರ್ ವ್ಯಾಪ್ತಿಯೊಳಗಿನ ಮನೆಗಳಿಗೆ ಆಹಾರ ಪೂರೈಕೆ ಮಾಡಲಿದೆ. ಮುಂದಿನ ದಿನಗಳಲ್ಲಿ 8 ಕಿಲೋ ಮೀಟರ್‌ ವ್ಯಾಪ್ತಿಗೂ ವಿಸ್ತರಿಸುವ ಸಾಮರ್ಥ್ಯ ಹೊಂದಲಿದ್ದೇವೆ. 18.8 ಕೆ.ಜಿ ತೂಕದ ಈ ಡ್ರೋನ್, ಸೆಕೆಂಡ್‌ಗೆ 10 ಮೀಟರ್‌ ವೇಗದಲ್ಲಿ ಸಾಗಲಿದೆ’ ಎಂದು ಕಂಪನಿಯ ಅಧಿಕಾರಿಗಳು ವಿವರಿಸುತ್ತಾರೆ.

200 ಮೀಟರ್ ಎತ್ತರದಲ್ಲಿ ಇದು ಹಾರಾಟ ನಡೆಸಲಿದ್ದು, ಯಾವುದೇ ಅಡೆತಡೆಗಳಲ್ಲದೆ ಸಾಗಲಿದೆ. ಇದಕ್ಕೆ ಪ್ರತ್ಯೇಕ ಆಯಪ್‌ ಅಭಿವೃದ್ಧಿಪಡಿಸಲಾಗುತ್ತಿದ್ದು, ಎಲ್ಲಾ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದೆ ಎಂದು ಕಂಪನಿಯ ಸಿಇಒ ಅಗ್ನೀಶ್ವರ್ ಜಯಪ್ರಕಾಶ್ ಹೇಳಿದರು.


Spread the love

About Laxminews 24x7

Check Also

2025-26 ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಶೈಕ್ಷಣಿಕ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮವನ್ನು ಶ್ರೀ ಜ್ಯೋತಿಪ್ರಸಾದ ಮತ್ತು ಬಸವಪ್ರಸಾದ ಜೊಲ್ಲೆ ಯವರು ಉದ್ಘಾಟಿಸಿ,ಚಾಲನೆ

Spread the loveಜೊಲ್ಲೆ ಎಜ್ಯುಕೇಶನ್ ಸೊಸೈಟಿಯ ಅಂಗಸಂಸ್ಥೆಯಾದ ಬಸವಜ್ಯೋತಿ ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜ,ಸ್ವಾಮಿ ವಿವೇಕಾನಂದ ಬಿ.ಸಿ.ಎ.ಕಾಲೇಜ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ