ಬೆಳಗಾವಿ : ಉತ್ತರ ಕರ್ನಾಟಕ ಭಾಗದ ಜನರಲ್ಲಿ ಪ್ರತ್ಯೇಕತೆಯ ಭಾವನೆ ಬರದಂತೆ ಈಬಾರಿಯ ಬಜೆಟ್ ಮಂಡಿಸಬೇಕು ಎಂದು ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮಿಗಳು ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಬುಧವಾರ ವಿವಿಧ ಮಠಾಧೀಶರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ನಾವು ಬೇಡಿಕೆ ಇಡುತ್ತ ಬಂದಿದ್ದೇವೆ. ಆದರೂ ಬೇಡಿಕೆಗಳು ಈಡೇರದೆ ಇರುವುದು ಬೇಸರ ತಂದಿದೆ. 400 ಕೋಟಿ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿರುವ ಸುವ್ರಣ ವಿಧಾನಸೌಧ ಏನೇನಬ ಉಪಯೋಗವಿಲ್ಲವಾಗಿದೆ. ಪೂರ್ಣಪ್ರಮಾಣದಲ್ಲಿ ಕಚೇರಿಗಳನ್ನು ಸ್ಥಳಾಂತರಿಸುವ ಮೂಲಕ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಬೇಕು. ಪೂರ್ಣಪ್ರಮಾಣದಲ್ಲಿ ಅಧಿವೇಶನ ನಡೆಸಬೇಕು ಎಂದು ಒತ್ತಾಯಿಸಿದರು.
ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಸಾರ್ವಜನಿಕರ ಹಣ ಸದುಪಯೋಗವಾಗಬೇಕು. ರಾಜಕೀಯ ಪಕ್ಷಗಳೂ ಸೂಕ್ಷ್ಮತೆಯಿಂದ ಕೆಲಸ ಮಾಡಬೇಕು. ಶಾಸಕರು ಪಕ್ಷಬೇಧ ಮರೆತು ಕೆಲಸ ಮಾಡಬೇಕು. ಪ್ರತ್ಯೇಕತೆಗೆ ನಮ್ಮ ಬಂಬಲವಿಲ್ಲ. ಆದರೆ ಪ್ರತ್ಯೇಕತೆ ಭಾವರೆ ಬಾರದಂತೆ ನೋಡಿಕೊಳ್ಳಬೇಕು ಎಂದರು.
ಏನೇ ಹೇಳಿದರೂ ಹುಬ್ಬಳ್ಳಿ – ಧಾರವಾಡ ಎನ್ನುತ್ತಾರೆ. ಒಂದೊಂದಾಗಿ ಕಚೇರಿಗಳು ಹುಬ್ಬಳ್ಳಿ – ಧಾರವಾಡಕ್ಕೆ ಸ್ಥಳಾಂತರವಾಗುತ್ತಿವೆ. ಬೆಳಗಾವಿ ಗಡಿ ಭಾಗವಾಗಿದ್ದರಿಂದ ಬೆಳಗಾವಿಯಲ್ಲಿ ಕಚೇರಿಗಳು ಸ್ಥಾಪನೆಯಾಗುವುದು ಮುಖ್ಯ. ಗಡಿ ಭಾಗಕ್ಕೆ ಪ್ರಾಶಸ್ತ್ಯ ನೀಡಬೇಕು. ಮಹಾರಾಷ್ಟ್ರದಂತೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಗಡಿ ಭಾಗದವರಿಗೆ ಮೀಸಲಾತಿ ಕಲ್ಪಿಸಬೇಕು.ಗಡಿ ಭಾಗದಲ್ಲಿರುವ ಕನ್ನಡಿಗರಿಗೆ ಸಹಾಯ ಮಾಡಬೇಕು. ಗಡಿ ಭಾಗವನ್ನು ಗಟ್ಟಿಗೊಳಿಸಲು ಹಲವು ಯೋಜನೆಗಳನ್ನು ತರಬೇಕು ಎಂದು ಅವರು ಆಗ್ರಹಿಸಿದರು.
ಕನ್ನಡ ಹೋರಾಟಗಾರರಿಗೆ ಕಿರುಕುಳ ನೀಡಲಾಗುತ್ತಿದೆ. ಅವರನ್ನು ಬಂಧಿಸಲಾಗುತ್ತದೆ. ಸರಕಾರ ಕನ್ನಡಿಗರಿಗೆ, ಕನ್ನಡ ಹೋರಾಟಗಾರರಿಗೆ ರಕ್ಷಣೆ ನೀಡಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು. ಪ್ರಶಸ್ತಿ ಪುರಸ್ಕಾರಗಳು ಬೆಂಗಳೂರಿಗೆ ಸೀಮಿತವಾಗಬಾರದು ಎಂದರು.
Laxmi News 24×7