Breaking News

ಕಲಬುರಗಿ ಕಲಾವಿದರ ಗುಂಪಿನಿಂದ “ಕ್ರಿಯೇಟಿವ್ ಕಾಂಟೋರ್ಸ”ಶೀರ್ಷಿಕೆ ಅಡಿ ಸಮೂಹ ಕಲಾ ಪ್ರದರ್ಶನ

Spread the love

ದಾವಣಗೆರೆ: ಕಲಬುರಗಿಯ ಚಿತ್ರ ಕಲಾವಿದ ರಾಮಗಿರಿ ಪೊಲೀಸ್ ಪಾಟೀಲ್ ರವರ ಸಂಯೋಜನೆ-ಸಂಚಾಲಕತ್ವದಲ್ಲಿ ಕಳೆದ9,10,11-2-2023 ರವರೆಗೆ ದಾವಣಗೆರೆಯ ದೃಶ್ಯ ವಿಶ್ವ ಕಲಾಗ್ಯಾಲರಿಯಲ್ಲಿ ಕಲಬುರಗಿ ಕಲಾವಿದರ ಗುಂಪಿನಿಂದ “ಕ್ರಿಯೇಟಿವ್ ಕಾಂಟೋರ್ಸ”ಶೀರ್ಷಿಕೆ ಅಡಿ ಸಮೂಹ ಕಲಾ ಪ್ರದರ್ಶನ ನಡೆಯಿತು.

ಇದರಲ್ಲಿ ಅಶೋಕ ಚಿತ್ಕೋಟಿ, ಬಿ.ಎನ್. ಪಾಟೀಲ್, ಭಾಗ್ಯ ಶ್ರೀ ಕುಲಕರ್ಣಿ, ಗಾಯತ್ರಿ ಕುಲಕರ್ಣಿ, ನಂದಿನಿ ಮುಸಿಗಿ,ಕೆ.ಎಸ್. ಕಾಮತಗೌಡರ್, ರಾಮಗಿರಿ ಪೋಲೀಸ್ ಪಾಟೀಲ್, ಸೂರ್ಯ ಕಾಂತ ನಂದೂರ,ಅಶ್ವಿನಿ ಭರತ್ ಗೋಮತಂ, ಜನನಿ ಮನೋಹರ್, ಪ್ರಮೀಳಾ ನಿಟ್ಟೂರ,ಶಿವಲೀಲಾ ಉಪ್ಪಿನ, ರೇಖಾ ಟೋಲೆ,ಉಮಾ ಮಠಪತಿ, ಮೀನಾಕ್ಷಿ ಗುತ್ತೇದಾರ್,ಲಕ್ಷ್ಮಿ ಹಿರೇಮಠ, ವಿವೇಕ ಕಟ್ಟೀಮಠ,ಸಂಜಯ ಕನಿಹಾಳ್ ಇವರುಗಳು ರಚಿಸಿದ ಕಲಾಕೃತಿಗಳು ಪ್ರದರ್ಶನದಲ್ಲಿದ್ದವು. ಒಟ್ಟು 32ಚಿತ್ರಗಳು ಇರಿಸಲ್ಪಟ್ಟಿದ್ದವು.

ಈ ಎಲ್ಲಾ ಕಲಾಕೃತಿಗಳ ಪೈಕಿ ಅಶೋಕ ಚಿತ್ಕೋಟಿ, ವಿವೇಕ ಕಟ್ಟಿಮನಿ, ಬಿ.ಎನ್. ಪಾಟೀಲ್, ನಂದಿನಿ ಮಸಿಗಿ,ಕಾಮತಗೌಡರ್, ರೇಖಾ ಟೋಲೆ,ಸೂರ್ಯಕಾಂತ ನಂದೂರ,ರಾಮಗಿರಿ ಪೋಲಿಸ್ ಪಾಟೀಲ್ ಇವರುಗಳ ಕಲಾಕೃತಿಗಳು ಕಲಾತ್ಮಕ ಗುಣಮಟ್ಟದ ದೃಷ್ಟಿಯಿಂದ ಕಲಾವಲಯದಲ್ಲಿ ತೊಡಗಿಕೊಂಡಿರುವ & ನಿರಂತರ ಕಲಾ ಪರಿವರ್ತನೆ ಗಮನಿಸುತ್ತಿರುವ ‘ಗಂಭೀರ ವರ್ಗ’ದವರ ಗಮನ ಸೆಳೆಯುವಂತಿದ್ದವು. ಗಾಂಧೀಜಿ, ಅಂಬೇಡ್ಕರ್ ರವರಂತಹ ಮಹಾನ್ ವ್ಯಕ್ತಿತ್ವಗಳಿಗೆ ಸಮಾಜ ಗೌರವಿಸುವ ‘ಕೇವಲ ಔಪಚಾರಿಕತೆ’ಯ ಕುರಿತಾಗಿ ಕಲಾವಿದರು ಅಭಿವ್ಯಕ್ತಿಸಿದ ಪರಿ ಬಹಳ ಸಾಂಕೇತಿಕ ಸ್ವರೂಪವೂ ,ಸಮಕಾಲೀನ ಕಲಾ ಜಾಡಿಗೆ ಅನುಗುಣವೂ ಆದುದು. ಈ ಚಿತ್ರಗಳಲ್ಲಿ ಕಲಾವಿದರು ಈ ಎರಡೂ ಮಹೋನ್ನತ ವ್ಯಕ್ತಿಗಳ ಕುತ್ತಿಗೆಯಿಂದ ಎದೆಯಮಟ್ಟದವರೆಗೆ ನೈಜಶೈಲಿಯಲ್ಲಿ (ಅವರುಗಳ ಜನಪ್ರಿಯ ಭಾವಚಿತ್ರಗಳಲ್ಲಿ ಇರುವಂತೆ)ರಚಿಸಿ, ಮುಖವನ್ನು ಚಿತ್ರಿಸದೇ ಖಾಲಿಯಾಗಿ ಇರಿಸಿದ್ದಾರೆ ಮತ್ತು ಆ ಎರಡೂ ಚಿತ್ರಗಳಿಗೂ ಮಾಲೆ ತೂಗುಹಾಕಿದ್ದಾರೆ. ಬಹುಅರ್ಥ ಕಲ್ಪಿಸುವ ಈ ಕಲಾಕೃತಿ ಇಡೀ ಪ್ರದರ್ಶನದ ಅನನ್ಯ ಕೃತಿಯಾಗಿ ತೋರ್ಪಡಯಾಯಿತೆನ್ನಬಹುದು.


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ