Breaking News

ಗಂಡನ ಕೊಲೆಗೆ ಪತ್ನಿಯಿಂದಲೇ ಸುಪಾರಿ; ಹುಟ್ಟುಹಬ್ಬದಂದೇ ಕೊಲೆಗೈದು ಕೆರೆಗೆ ಎಸೆದ್ರು!

Spread the love

ತುಮಕೂರು: ನೂರು ವರ್ಷ ಒಬ್ಬರಿಗೊಬ್ಬರು ಜೊತೆಯಾಗಿ ಇರ್ತೀವಿ ಅಂತ ಹಿರಿಯ ಸಮ್ಮುಖದಲ್ಲಿ ಗಂಡನ (Husband) ಕೈ ಹಿಡಿದಿದ್ದ ಮಹಿಳೆಯೇ (Women) ಗಂಡನನ್ನು ಕೊಲೆ ಮಾಡಲು ಸುಪಾರಿ ನೀಡಿದ್ದ ಘಟನೆ ತುಮಕೂರು (Tumakuru) ಜಿಲ್ಲೆಯ ಕುಣಿಗಲ್ (Kunigal)​​ನಲ್ಲಿ ಬೆಳಕಿಗೆ ಬಂದಿದೆ.

ಹೆಂಡತಿಯೇ ಗಂಡನ (Wife) ಕೊಲೆಗೆ ಸುಪಾರಿ ಕೊಟ್ಟು ಆತನನ್ನು ಪರಲೋಕಕ್ಕೆ ಕಳುಹಿಸಿದ್ದಾಳೆ. ಇದರೊಂದಿಗೆ ಹುಟ್ಟುಹಬ್ಬದ ದಿನವೇ ಅನುಮಾನಸ್ಪದಾಗಿ ಸಾವನ್ನಪ್ಪಿದ್ದ ವ್ಯಕ್ತಿಯ ಪ್ರಕರಣವನ್ನು ಕುಣಿಗಲ್​​ ಪೊಲೀಸರು (Police) ಬೇದಿಸಿದ್ದು, ಪ್ರಕರಣದಲ್ಲಿ ಕೊಲೆದ ವ್ಯಕ್ತಿಯ ಪತ್ನಿ ಸೇರಿದಂತೆ ಮೂವರನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಏನಿದು ಪ್ರಕರಣ?

ಫೆಬ್ರವರಿ 03 ರಂದು ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿ ಗ್ರಾಮದ ಮಂಜುನಾಥ್ ಅನುಮಾನಸ್ಪದಾಗಿ ಸಾವನ್ನಪ್ಪಿದ್ದರು. ಮಂಜುನಾಥ್​ ಮೃತದೇಹ ಗ್ರಾಮದ ಕಿತ್ನಾಮಂಗಲ ಕೆರೆಯ ಬಳಿ ಪತ್ತೆಯಾಗಿತ್ತು. ಅಂದು ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು ಮನೆಗೆ ಬಂದಿದ್ದ ಮಂಜುನಾಥ್, ಮಧ್ಯರಾತ್ರಿ 12 ಸುಮಾರಿಗೆ ಯಾವುದೋ ಫೋನ್​ ಬಂತು ಅಂತ ಮನೆಯಿಂದ ಹೊರ ಹೋಗಿದ್ದರಂತೆ.

ಆ ಬಳಿ ಎಷ್ಟೇ ಸಮಯವಾದರೂ ಆತನ ಮನೆಗೆ ವಾಪಸ್​ ಆಗಿರಲಿಲ್ಲವಂತೆ. ಆದರೆ ಮರುದಿನ ಬೆಳಗ್ಗೆ ಆತನ ಮೃತದೇಹ ಗ್ರಾಮದಿಂದ ಒಂದು ಕಿಲೋಮೀಟರ್​ ದೂರದ ಇರುವ ಕಿತ್ನಾಮಂಗಲ ಕೆರೆಯಲ್ಲಿ ಪತ್ತೆಯಾಗಿತ್ತು.


Spread the love

About Laxminews 24x7

Check Also

ರಾಜ್ಯದಲ್ಲಿ ವಿವಿಧ ಬೆಳೆಗಳ ಬಿತ್ತನೆ ನಡೆಯುತ್ತಿದ್ದು, ರಾಸಾಯನಿಕ ಗೊಬ್ಬರದ ಬೇಡಿಕೆ ಹೆಚ್ಚಿದೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ

Spread the loveಮೈಸೂರು: ಪ್ರಸಕ್ತ ಸಾಲಿಗೆ ರಾಸಾಯನಿಕ ಗೊಬ್ಬರದ ಕೊರತೆಯಿಲ್ಲ. ಆದರೆ, ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಯೂರಿಯಾ ಪೂರೈಕೆಯನ್ನು ಶೇ.50ರಷ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ