ಬೆಂಗಳೂರು: ವಿದ್ಯುತ್ ಬಿಲ್ ವಸೂಲಿ ನೆಪದಲ್ಲಿ ಬೆಸ್ಕಾಂ ಅಧಿಕಾರಿಗಳ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ವಂಚನೆ ಮಾಡುವ ಸೈಬರ್ ಕಳ್ಳರ ಹಾವಳಿ ತಪ್ಪಿಲ್ಲ. ವೃದ್ಧರೊಬ್ಬರಿಗೆ ಕರೆ ಮಾಡಿ ಬ್ಯಾಂಕ್ ಖಾತೆಗೆ 1.98 ಲಕ್ಷ ರೂ. ಕನ್ನ ಹಾಕಿರುವ ಸಂಬಂಧ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಸ್ವತಿನಗರ ನಿವಾಸಿ ಎ.ಆರ್.ಕೃಷ್ಣಮೂರ್ತಿ ಎಂಬುವರು ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಫೆ.2ರಂದು ಕೃಷ್ಣಮೂರ್ತಿ ಅವರ ಮೊಬೈಲ್ಫೋನ್ಗೆ ಕರೆ ಮಾಡಿರುವ ಸೈಬರ್ ಕಳ್ಳರು ಬೆಸ್ಕಾಂ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು ‘ವಿದ್ಯುತ್ ಬಿಲ್ ಬಾಕಿ ಉಳಿದಿದೆ. ತಕ್ಷಣ ಪಾವತಿ ಮಾಡಬೇಕು. ಇಲ್ಲವಾದರೆ ನಿಮ್ಮ ಮನೆಗೆ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತೇವೆ’ ಎಂದಿದ್ದಾರೆ.