Breaking News

ಚೀನಾಗೆ ಮತ್ತೆ ಹೊಡೆತ – ಮಾರುಕಟ್ಟೆಗೆ ಬರಲಿದೆ 33 ಕೋಟಿ ಸ್ವದೇಶಿ ಹಣತೆ

Spread the love

ನವದೆಹಲಿ: ರಕ್ಷಾ ಬಂಧನದ ಸಮಯದಲ್ಲಿ ಚೀನಾಗೆ ತಿರುಗೇಟು ನೀಡಿದ್ದ ಭಾರತ ಈಗ ದೀಪಾವಳಿ ಸಮಯದಲ್ಲೂ ಆರ್ಥಿಕವಾಗಿ ಹೊಡೆತ ನೀಡಲು ಮುಂದಾಗುತ್ತಿದೆ.

ಈ ವರ್ಷದ ದೀಪಾವಳಿಗೆ 33 ಕೋಟಿ ಪರಿಸರ ಸ್ನೇಹಿ ಹಣತೆ ಮಾರುಕಟ್ಟೆಗೆ ಬರಲಿದೆ. ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭಭಾಯ್ ಕಥಿರಿಯಾ ಈ ವಿಚಾರವನ್ನು ತಿಳಿಸಿದ್ದು, ಮುಂದಿನ ತಿಂಗಳು 33 ಕೋಟಿ ಪರಿಸರ ಸ್ನೇಹಿ ಹಣತೆಗಳು ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಿದ್ದಾರೆ.

ವದೇಶಿ ಉತ್ಪನ್ನಗಳ ರಕ್ಷಣೆ ಮತ್ತು ಉತ್ತೇಜನಕ್ಕೆ ಈ ಆಯೋಗವನ್ನು 2019ರಲ್ಲಿ ಸ್ಥಾಪನೆ ಮಾಡಲಾಗಿದೆ. ಈಗ ದೇಶದೆಲ್ಲೆಡೆ ಸಗಣಿಯಿಂದ ತಯಾರಾದ ಉತ್ಪನ್ನಗಳನ್ನು ಉತ್ತೇಜಿಸಲು ಆಯೋಗ ಮುಂದಾಗುತ್ತಿದೆ.

ಚೀನಾದಲ್ಲಿ ತಯಾರಾದ ಹಣತೆಯನ್ನು ಈ ಬಾರಿ ತಿರಸ್ಕರಿಸಿ ಮೇಕ್‌ ಇನ್‌ ಇಂಡಿಯಾ ಅಭಿಯಾನದಲ್ಲಿ ತಯಾರಾಗಿರುವ ಹಣತೆಯನ್ನು ಬಳಸಬೇಕು. ಈ ಮೂಲಕ ದೇಶದ ಗ್ರಾಮೀಣ ಜನರ ಕೆಲಸವನ್ನು ಪ್ರೋತ್ಸಾಹಿಸಬೇಕು ಎಂದು ಜನರಲ್ಲಿ ಆಯೋಗ ಕೇಳಿಕೊಂಡಿದೆ.


Spread the love

About Laxminews 24x7

Check Also

ಸಂವಿಧಾನ ರಕ್ಷಣೆಯ ಕ್ರಾಂತಿಯಾಗಲಿ: ಬಸವರಾಜ ಬೊಮ್ಮಾಯಿ*

Spread the love  ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿಯವರ ಕಲ್ಯಾಣ ರಾಜ್ಯದ ಕನಸಿಗೆ ಎಲ್ಲರೂ ಬೆಂಬಲ ಕೊಟ್ಟಾಗ ಮಾತ್ರ ವಿಕಸಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ