Breaking News

ಚಿರಂಜೀವಿ ಸರ್ಜಾ ಅಭಿನಯದ ಕಟ್ಟ ಕಡೆಯ ಚಿತ್ರ ‘ಶಿವಾರ್ಜುನ’ ರೀ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್

Spread the love

ದಿವಂಗತ ನಟ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ಕಟ್ಟ ಕಡೆಯ ಚಿತ್ರ ‘ಶಿವಾರ್ಜುನ’ ರೀ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಚಿರಂಜೀವಿಯನ್ನು ಕಳೆದುಕೊಂಡು ದುಃಖದಲ್ಲಿದ್ದ ಅಭಿಮಾನಿ ಬಳಗಕ್ಕೆ ಈ ಸುದ್ದಿ ಕೇಳಿ ಮನದುಂಬಿ ಬಂದಿದೆ. ಮತ್ತೊಮೆ ಚಿರಂಜೀವಿ ಸರ್ಜಾರನ್ನ ಬೆಳ್ಳಿ ತೆರೆ ಮೇಲೆ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

ಶಿವಾರ್ಜುನ’ ಚಿತ್ರ ಮಾರ್ಚ್ 12ರಂದು ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಮರು ದಿನವೇ ಸರ್ಕಾರ ಕೋವಿಡ್ 19 ಎಚ್ಚರಿಕೆಯ ಕ್ರಮವಾಗಿ ಚಿತ್ರಮಂದಿರವನ್ನು ಬಂದ್ ಮಾಡಿತ್ತು. ಇದೀಗ ಸುಮಾರು ಏಳು ತಿಂಗಳ ಬಳಿಕ ಚಿತ್ರಮಂದಿರ ತೆರೆಯಲು ಸರ್ಕಾರ ಅನುಮತಿ ನೀಡಿದ್ದು ಶಿವಾರ್ಜುನ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ.

ಈ ಬಗ್ಗೆ ಮಾತನಾಡಿದ ಚಿತ್ರದ ನಿರ್ದೇಶಕ ಶಿವತೇಜಸ್ ಬಿಡುಗಡೆಯಾಗಿ ಎರಡು ದಿನವಷ್ಟೇ ಚಿತ್ರ ಪ್ರದರ್ಶನ ಕಂಡಿತ್ತು. ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ಎಲ್ಲೆಡೆ ಕೇಳಿ ಬಂದಿತ್ತು ಆದ್ರಿಂದ ಚಿತ್ರವನ್ನು ಮರು ಬಿಡುಗಡೆ ಮಾಡಲು ತೀರ್ಮಾನಿಸಿದ್ದೇವೆ. ಅಕ್ಟೋಬರ್ 16ರಂದು ಶಿವಾರ್ಜುನ ಚಿತ್ರ ರಾಜ್ಯಾದ್ಯಂತ ಮತ್ತೊಮ್ಮೆ ಬಿಡುಗಡೆಯಾಗಲಿದೆ ಎಂದು ಶಿವತೇಜಸ್ ತಿಳಿಸಿದ್ದಾರೆ.

ನಾಯಕ ನಟ ಚಿರು ಅಗಲಿಕೆ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಶಿವತೇಜಸ್ ಚಿತ್ರದ ನಾಯಕ ನಟ ನಮ್ಮೊಂದಿಗಿಲ್ಲ ಅನ್ನೋದೇ ಬೇಸರದ ಸಂಗತಿ. ಅವ್ರ ಅಗಲಿಕೆ ನೋವಲ್ಲೇ ಅವ್ರ ಕೊನೆಯ ಸಿನಿಮಾವನ್ನು ರೀರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡು ದುಃಖದಲ್ಲಿರೋ ಚಿರು ಅಭಿಮಾನಿ ಬಳಗಕ್ಕೆ ಮತ್ತೊಮ್ಮೆ ಚಿರು ನಟನೆಯ ಕೊನೆಯ ಚಿತ್ರವನ್ನು ತೆರೆ ಮೇಲೆ ನೋಡೋ ಅವಕಾಶ ಇದ್ರಿಂದ ಮತ್ತೆ ಸಿಕ್ಕಾಂತಾಗಿದೆ. ‘ಶಿವಾರ್ಜುನ’ ಚಿತ್ರಕ್ಕೆ ಸುರಾಗ್ ಕೋಕಿಲ ಸಂಗೀತ, ವೇಣು ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಚಿರಂಜೀವಿ ಸರ್ಜಾ, ಅಮೃತ ಐಯ್ಯಂಗರ್, ರವಿಕಿಶನ್, ಸಾಧುಕೋಕಿಲ, ತಾರಾ, ಕಿಶೋರ್. ಚಿತ್ರದ ತಾರಾಂಗಣದಲ್ಲಿದ್ದಾರೆ.


Spread the love

About Laxminews 24x7

Check Also

ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ

Spread the love ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ