ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ. ಜನರಿಗೆ ದಾನ, ಧರ್ಮ ಮಾಡುವ ಕೈ ಅಧಿಕಾರಲ್ಲಿದ್ದರೆ ಚೆಂದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಈ ದೇಶ ಹಾಗೂ ರಾಜ್ಯದಲ್ಲಿ ವಿವಿಧ ಧರ್ಮ, ಜಾತಿ, ವರ್ಗ, ಪಂಗಡದ ಜನರು ಸಹೋದರರಂತೆ ಬದುಕುತ್ತಿದ್ದಾರೆ.
ಆದರೆ ಬಿಜೆಪಿ “ಹಿಂದೂ ನಾವೆಲ್ಲ ಒಂದು’ ಎಂದು ಧರ್ಮ, ಜಾತಿ, ವರ್ಗದ ನಡುವೆ ತಾರತಮ್ಯ ನೀತಿ ಅನುಸರಿಸಿ ಅಶಾಂತಿ ಸೃಷ್ಟಿಸಿದೆ.
ಕಾಂಗ್ರೆಸ್ ಎಲ್ಲರನ್ನೂ ಸೇರಿಸಿ “ನಾವೆಲ್ಲ ಒಂದು’ ಎಂದು ಹೇಳುತ್ತಿದೆ ಎಂದರು.