Breaking News

ಕಾಯಕ ನಿಷ್ಠೆಯುಳ್ಳವರ ಬದುಕು ಬೆಳಗುತ್ತೆ; ಡಾ| ವಿಜಯ ಸಂಕೇಶ್ವರ

Spread the love

ಮುಂಡರಗಿ: 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರ ಕಾಯಕ ಹಾಗೂ ದಾಸೋಹ ಸೇವೆಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಅಳವಡಿಸಿಕೊಂಡು ಬದುಕಿದವರು ಮಾತ್ರ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಬಹುದು. ಕಾಯಕದಲ್ಲಿ ನಿಷ್ಠೆಯುಳ್ಳವರು ಬದುಕಿನಲ್ಲಿ ಬೆಳೆಯಲು ಸಾಧ್ಯ ಎಂದು ವಿಆರ್‌ಎಲ್‌ ಸಮೂಹ ಸಂಸ್ಥೆ ಮುಖ್ಯಸ್ಥ ಡಾ| ವಿಜಯ ಸಂಕೇಶ್ವರ ಹೇಳಿದರು.

 

ಪಟ್ಟಣದ ಜ| ಅನ್ನದಾನೀಶ್ವರ ಸಂಸ್ಥಾನಮಠ 153ನೇ ಜಾತ್ರಾ ಮಹೋತ್ಸವದಲ್ಲಿ ನಾಡೋಜ ಡಾ|ಅನ್ನದಾನೀಶ್ವರ ಮಹಾಶಿವಯೋಗಿಗಳವರಿಂದ “ಜಗದ್ಗುರು ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರ’ ಹಾಗೂ ಚಿನ್ನದ ಉಂಗುರುವನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಿ ಅವರು ಮಾತನಾಡಿದರು.

ಇಂದಿನ ಯುವಕರಲ್ಲಿ ಕಾಯಕ ವೃತ್ತಿ ಕಡಿಮೆಯಾಗುತ್ತಿರುವುದಕ್ಕೆ ಬೇಸರವಾಗುತ್ತಿದೆ. ನಮ್ಮ ಸಂಸ್ಥೆಯ ನೌಕರರ ಪ್ರಾಮಾಣಿಕ ಸೇವೆಯೇ ವಿಆರ್‌ಎಲ್‌ ಸಮೂಹ ಸಂಸ್ಥೆ ಬೆಳೆಯಲು ಕಾರಣವಾಗಿದೆ. ಎಲ್ಲರೂ ಕಾಯಕ ನಿಷ್ಠೆಯಿಂದ ಸೇವೆ ಮಾಡಬೇಕೆಂದರು. ನಿವೃತ್ತ ಪ್ರಾಚಾರ್ಯ ಪಂಚಾಕ್ಷರಯ್ಯ ಮಾತನಾಡಿ, ಗುರುವಿನ ಪ್ರೇರಣೆ ಇದ್ದರೆ ಬದುಕು ಸಾರ್ಥಕಗೊಳ್ಳುತ್ತದೆ. ಪ್ರತಿಯೊಬ್ಬರಲ್ಲಿ ದುಡಿದು ಬದುಕುವ ಸಂಸ್ಕೃತಿ ಇರಬೇಕು. ಭಾರತದಲ್ಲಿ ರಸಾಯನಿಕ ಗೊಬ್ಬರ ಹೊಲಗಳಲ್ಲಿ ಉಪಯೋಗ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ
ಎಂದರು.

ಪುರಸಭೆ ಅಧ್ಯಕ್ಷೆ ಕವಿತಾ ಎ. ಉಳ್ಳಾಗಡ್ಡಿ ಮಾತನಾಡಿ, ಎಲ್ಲರೂ ಧರ್ಮ, ಸಂಸ್ಕೃತಿಯಿಂದ ಸಂಸ್ಕಾರವಂತರಾಗಬೇಕು. ವಿಜ್ಞಾನ ಭವನಕ್ಕೆ ಪುರಸಭೆ ಮುಂಗಡ ಪತ್ರದಲ್ಲಿ 10 ಲಕ್ಷ ರೂ. ಅನುದಾನ ಮೀಸಲಿ ಡಲಾಗುವುದು ಎಂದರು. ಸಾನ್ನಿಧ್ಯ ವಹಿಸಿದ್ದ ನಾಡೋಜ ಜಗದ್ಗುರು ಡಾ| ಅನ್ನದಾನೀಶ್ವರ ಮಹಾಶಿವಯೋಗಿಗಳವರು, ಶ್ರೀಮಠದ ಧಾರ್ಮಿಕ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಡಾ|ಚನ್ನಮಲ್ಲ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಹಾಂತೇಶ ಶಾಸ್ತ್ರೀಗಳು ಮಾತನಾಡಿದರು. ಶಿವಕುಮಾರ ದೇವರು ಆಶಯ ನುಡಿಗಳನ್ನಾಡಿದರು. ಜ.ಅ. ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ|ಬಿ.ಜಿ.ಜವಳಿ ಅವರು ಡಾ| ವಿಜಯ ಸಂಕೇಶ್ವರ ಅವರ ಸೇವೆ ಪರಿಚಯಿಸಿದರು.

ಶ್ರೀ ಗುರುಸಿದ್ಧ ಮಹಾಸ್ವಾಮೀಜಿ, ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗಳನ್ನು ಸನ್ಮಾನಿಸಲಾಯಿತು. ಪಂ| ರಾಜಗುರು ಗುರುಸ್ವಾಮಿ ಕಲಕೇರಿ ಗವಾಯಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು. ಶ್ರೀಮಠದ ಉತ್ತರಾಧಿಕಾರಿಗಳಾದ ಡಾ|ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಶ್ರೀ ಶಿವಯೋಗೀಶ್ವರ ಮಹಾಸ್ವಾಮೀಜಿ, ಎ.ಕೆ. ಬೆಲ್ಲದ, ಈಶ್ವರಪ್ಪ ಹಂಚಿನಾಳ, ನಾರಾಯಣ ಇಲ್ಲೂರ, ಕರಬಸಪ್ಪ ಹಂಚಿನಾಳ, ಶಮಂತಕಮಣಿ ಇಲ್ಲೂರ, ಆರ್‌.ಬಿ.ಡಂಬಳಮಠ, ಗಿರೀಶ ಅಂಗಡಿ, ಪ್ರದೀಪ ಗುಡದಪ್ಪನವರ, ಮಂಜುನಾಥ ಮುಧೋಳ, ಪ್ರಶಾಂತ ಗುಡದಪ್ಪನವರ, ಎಸ್‌. ಎಸ್‌. ಗಡ್ಡದ, ಎಸ್‌.ಎಂ. ಅಗಡಿ, ಡಾ|ಡಿ.ಸಿ.ಮಠ, ಶಿವರಾಜಸ್ವಾಮಿ, ವಿರುಪಾಕ್ಷಪ್ಪ, ಎಸ್‌.ಸಿ. ಚಕ್ಕಡಿಮಠ, ಅಂದಪ್ಪ ಗೋಡಿ, ವೀರೇಶ ಸಜ್ಜನ ಮತ್ತಿತರರು ಪಾಲ್ಗೊಂಡಿದ್ದರು. ಎಸ್‌.ಆರ್‌. ರಿತ್ತಿ, ಎಸ್‌.ಎಸ್‌. ಇನಾಮತಿ ನಿರೂಪಿಸಿದರು.


Spread the love

About Laxminews 24x7

Check Also

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ