Breaking News

ಕೇಂದ್ರ ಸರ್ಕಾರದ ಬಜೆಟ್ ಸ್ವತಃ ಬಿಜೆಪಿ ಸಂಸದರಿಗೇ ಅರ್ಥವಾಗಿಲ್ಲ: ಕಾಂಗ್ರೆಸ್ ಟೀಕೆ

Spread the love

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ ಸ್ವತಃ ಬಿಜೆಪಿ ಸಂಸದರಿಗೇ ಅರ್ಥವಾಗಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಹೇಳಿಕೆ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸ್ವತಃ ಬಿಜೆಪಿ ಸಂಸದರಿಗೇ ಕೇಂದ್ರ ಸರ್ಕಾರದ ಬಜೆಟ್ ಅರ್ಥವಾಗಿಲ್ಲ, ತಮ್ಮದೇ ಪಕ್ಷದವರನ್ನು ಮೆಚ್ಚಿಸಲಾಗದ ಬಜೆಟ್ ಜನ ಸಾಮಾನ್ಯರನ್ನು ತಲುಪುವುದೇ?

ಬಜೆಟ್ ದಿನಸಿ ಅಂಗಡಿ ಮಾಲೀಕನೊಬ್ಬ ಕೊಡುವ ಬಿಲ್‌ನಂತಿದೆ ಎಂದು ಸುಬ್ರಹ್ಮಣ್ಯ ಸ್ವಾಮಿ ಹೇಳಿದ್ದಾರೆ. ಇದು ಸ್ಪಷ್ಟ ದೃಷ್ಟಿಕೋನವಿಲ್ಲದ ಪೊಳ್ಳು ಬಜೆಟ್ ಎನ್ನುವುದೇ ಇದರ ಅರ್ಥ! ಎಂದು ಕಿಡಿಕಾರಿದೆ.

‘ಇಂದು ಮಂಡಿಸಿದ್ದು ಬಜೆಟ್ ಹೌದೇ? ಇದೊಂದು ದಿನಸಿ ಅಂಗಡಿ ಮಾಲೀಕ ಕೊಡುವ ಬೆಲೆಪಟ್ಟಿ ಇದ್ದಂತಿದೆ- ಒಂದು ಒಳ್ಳೆಯ ಬಜೆಟ್‌ ತನ್ನ ಧ್ಯೇಯೋದ್ದೇಶಗಳೇನು ಎಂಬುದನ್ನು ತೆರೆದಿಡಬೇಕು. ಜಿಡಿಪಿ ಬೆಳವಣಿಗೆ ದರದ ಕುರಿತು ಹೇಳಬೇಕೆಂದರೆ, ಹೂಡಿಕೆಯ ಪ್ರಮಾಣ ಎಷ್ಟು, ಬರುವ ಆದಾಯ ಎಷ್ಟು, ಸರ್ಕಾರದ ಆದ್ಯತೆಗಳೇನು, ಆರ್ಥಿಕ ಮಾರ್ಗೋಪಾಯಗಳೇನು ಮತ್ತು ಸಂಪನ್ಮೂಲ ಕ್ರೋಡೀಕರಣ ಇವೆಲ್ಲವನ್ನೂ ಸಾರ್ವಜನಿಕರ ಮುಂದಿಡಬೇಕಾಗುತ್ತದೆ’ ಎಂದು ಸುಬ್ರಮಣಿಯನ್‌ ಸ್ವಾಮಿ ಟ್ವೀಟ್ ಮಾಡಿದ್ದರು.

ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣಾವಧಿ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಂಡಿಸಿದ್ದರು.

ಎನ್‌ಡಿಎ ಸರ್ಕಾರದ ಎರಡನೇ ಅವಧಿಯ ಪೂರ್ಣ ಪ್ರಮಾಣದ ಬಜೆಟ್‌ ಇದಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಜನಸಾಮಾನ್ಯರು ಬಳಸುವ ಕೆಲವು ಸರಕುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದರೆ, ಇನ್ನು ಹಲವು ಸರಕುಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲಾಗಿದೆ.


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ