Breaking News

ಹಳ್ಳಕ್ಕೆ ಬಿದ್ದು ಒಂದೇ ಕುಟುಂಬದ ಇಬ್ಬರು ಬಾಲಕರು ಮೃತ್ಯು. ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ

Spread the love

ಕುರುಗೋಡು: ಕುರುಗೋಡು: ಗುತ್ತಿಗನೂರು ಗ್ರಾಮದಲ್ಲಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಹಳ್ಳದಲ್ಲಿ ಕಾಲು ಜಾರಿ ಬಿದ್ದು ಮೃತ ಪಟ್ಟಿರುವ ದಾರುಣ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಗುತ್ತಿಗನೂರು ಗ್ರಾಮದ ಕುರುಬ ಸಮುದಾಯದ ತಂದೆ ಮಲ್ಲಿಕಾರ್ಜುನ ತಾಯಿ ಲಕ್ಷ್ಮಿ ಅವರ ಮೊದಲನೇ ಮಗ ಮತ್ತು ಕೊನೆಯ ಮಗ ಬೇರೆ ಗ್ರಾಮಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಮಂಗಳವಾರ ಗ್ರಾಮದಲ್ಲಿ ಅಂಬಾದೇವಿ ಜಾತ್ರಾ ಮಹೋತ್ಸವ ಇದ್ದ ಕಾರಣಕ್ಕೆ ಗ್ರಾಮಕ್ಕೆ ಬಂದಿದ್ದಾರೆ, ಗುರುವಾರ ಮಧ್ಯಾಹ್ನ ಗ್ರಾಮದ ಹಳ್ಳದ ತೀರಕ್ಕೆ ಬಯಲು ಬಹಿರ್ದೆಸೆಗೆಂದು ತೆರಳಿದ ಸಂದರ್ಭ ಇಬ್ಬರು ಕಾಲು ಜಾರಿ ಬಿದ್ದು ನೀರು ಪಲಾಗಿದ್ದಾರೆ.

 

ಇವರ ಜೊತೆಗೆ ಇದ್ದ ಸಂಬಂಧಿ ಸುರೇಶ್ ಎನ್ನುವ ಬಾಲಕ ಗ್ರಾಮಸ್ಥರಿಗೆ ತಿಳಿಸಿದ್ದಾನೆ ಕೂಡಲೇ ಸ್ಥಳಕ್ಕೆ ಬಂದ ಸ್ಥಳೀಯರು ಹರ್ಷವರ್ಧನ ದೇಹವನ್ನು ನೀರಿನಿಂದ ಮೇಲೆ ತಂದಿದ್ದಾರೆ ನಂತರ ಮಣಿಕಂಠನನ್ನು ಹುಡುಕಾಡಿದರೂ ಸಿಗದೆ ಕೆಲ ಸಮಯದ ಬಳಿಕ ಮೃತದೇಹ ಪತ್ತೆಯಾಗಿದೆ.

ಅಂಬಾದೇವಿ, ಗಂಗಾದೇವಿ ನಮ್ಮ ಮಕ್ಕಳೇ ಬೇಕಿತ್ತಾ ನಿಮಗೆ… ಇಬ್ಬರು ಮಕ್ಕಳ ಜೀವ ಕಸಿದುಕೊಂಡು ನಮ್ಮ ಕುಟುಂಬವನ್ನೇ ಅನಾಥ ಮಾಡಿ ಬಿಟ್ಟಿಯಲ್ಲ ಎಂದು ಕುಟುಂಬಸ್ಥರು ತಮ್ಮ ಆಕ್ರಂದವನ್ನು ಹೊರ ಹಾಕಿದರು.

ಮೃತ ಪಟ್ಟ ಬಾಲಕರ ಶವವನ್ನು ಶಾಸಕ ಗಣೇಶ್ ತಮ್ಮ ಕಾರಿನಲ್ಲಿ ಮನೆಗೆ ಸಾಗಿಸಿ ನಂತರ ಕುರುಗೋಡಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಿದ್ದಾರೆ.

ಮೃತ ಪಟ್ಟ ಹಿರಿಯ ಪುತ್ರ ಮಣಿಕಂಠ (14) ಕುರುಗೋಡಿನ ಬೈಲೂರು ಗ್ರಾಮದ ಶಾರದ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ವಿದ್ಯಾಭ್ಯಾಸ ಪಡಿಯುತಿದ್ದ, ಕೊನೆ ಪುತ್ರ ಹರ್ಷ ವರ್ದನ (9) ಬಳ್ಳಾರಿ ಯ ಅಂಬೇಡ್ಕರ್ ವಸತಿ ನಿಲಯದಲ್ಲಿ ವಿದ್ಯಾಭ್ಯಾಸ ಪಡಿಯುತಿದ್ದ ಇನ್ನೂ ಎರಡನೇ ಪುತ್ರ ಅರ್ಜುನ್ ಹೊಸಪೇಟೆ ಯಲ್ಲಿ ವಿದ್ಯಾಬ್ಯಾಸ ಪಡಿಯುತ್ತಿದ್ದಾನೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ