Breaking News

ಸಾಮಾನ್ಯ ಗುರುತಿನ ಚೀಟಿಯಾಗಿ ಇನ್ನು ಮುಂದೆ ‘ಪ್ಯಾನ್ ಕಾರ್ಡ್’ ಪರಿಗಣನೆ

Spread the love

ವದೆಹಲಿ: ಇನ್ನು ಮುಂದೆ ವ್ಯಾಪಾರಸ್ಥರು ಡಿಜಿಟಲ್ ವ್ಯವಹಾರಗಳಿಗೆ ಪ್ಯಾನ್​ ಕಾರ್ಡ್​ನ್ನು ಸಾಮಾನ್ಯ ಗುರುತಿನ ಕಾರ್ಡ್​ ಆಗಿ ಪರಿಗಣನೆಗೆ ತೆಗೆದುಕೊಳ್ಳಬಹುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೇಂದ್ರ ಸರ್ಕಾರದ 2023-24ನೇ ಸಾಲಿನ ಬಜೆಟ್​ನಲ್ಲಿ ಘೋಷಿಸಿದ್ದಾರೆ.

 

ವಿತ್ತ ಸಚಿವೆಯಾಗಿ ಇಂದು 5ನೇ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್​​, ಪಾನ್​ ಕಾರ್ಡ್​ನ್ನು ಸಾಮಾನ್ಯ ಕಾರ್ಡ್​ ಆಗಿ ಬಳಕೆ ಮಾಡುವುದರಿಂದ ಬಂಡವಾಳದಾರರಿಗೆ ಮತ್ತಷ್ಟು ಸಹಕಾರಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸರಕು ಮತ್ತು ಸೇವಾ ತೆರಿಗೆ ಗುರುತಿನ ಸಂಖ್ಯೆ (GSTIN), ತೆರಿಗೆದಾರರ ಗುರುತಿನ ಸಂಖ್ಯೆ (TIN), ತೆರಿಗೆ ಕಡಿತ ಖಾತೆ ಸಂಖ್ಯೆ (TDA), ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ನಂತಹ ಗುರುತಿನ ಚೀಟಿಗಳನ್ನು ಬಳಸಲಾಗುತ್ತದೆ.

ಇದೆಲ್ಲವನ್ನು ಸರಳೀಕೃತಗೊಳಿಸುವ ಉದ್ಧೇಶದಿಂದ ಪ್ಯಾನ್​ಕಾರ್ಡ್​ನ್ನು ಸಾಮಾನ್ಯ ಗುರುತಿನ ಚೀಟಿಯಾಗಿ ಬಳಸಬಹುದು ಎಂದು ನಿರ್ಮಾಲಾ ಸೀತಾರಾಮನ್ ಹೇಳಿದ್ದಾರೆ


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ