Breaking News

ಹಿರೇಬಾಗೇವಾಡಿ: ಟ್ರ್ಯಾಕ್ಟರ್‌ಗೆ ಟಿಪ್ಪರ್ ಡಿಕ್ಕಿ, ಚಾಲಕ ಸ್ಥಳದಲ್ಲೇ ಸಾವು

Spread the love

ಹಿರೇಬಾಗೇವಾಡಿ (ಬೆಳಗಾವಿ ತಾ): ಸಮೀಪದ ಸುವರ್ಣ ವಿಧಾನಸೌಧದ ಬಳಿ ಬುಧವಾರ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ರಸ್ತೆಯಲ್ಲಿ ಟ್ರ್ಯಾಕ್ಟರಿಗೆ ಟಿಪ್ಪರ್ ಡಿಕ್ಕಿ ಹೊಡೆದು ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ತಾಲ್ಲೂಕಿನ ಹಲಗಾ ಗ್ರಾಮದ ಸಂತೋಷ ಮಹಾವೀರ ಹುಡೇದ (23) ಮೃತಪಟ್ಟವರು.

 

ಸುವರ್ಣ ವಿಧಾನಸೌಧದ ಎದುರಿನ ಕಮಕಾರಟ್ಟಿ ರಸ್ತೆಯಲ್ಲಿ ಖಡಿ ತರಲು ಟ್ರ್ಯಾಕ್ಟರ್ ಹೊರಟಿತ್ತು. ಖಡಿ ತುಂಬಿಕೊಂಡು ಬಂದ ಟಿಪ್ಪರ್ ವಾಹನ ಟ್ರ್ಯಾಕ್ಟರನ್ನು ಹಿಂದಿಕ್ಕುವ ಭರದಲ್ಲಿ ಎರಡೂ ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿತು.

ಟಿಪ್ಪರ್ ಗುದ್ದಿದ ರಭಸಕ್ಕೆ ಟ್ರ್ಯಾಕ್ಟರ್ ಎಂಜಿನ್ ತುಂಡಾಗಿ ರಸ್ತೆ ಬದಿಯ ಕಂದಕಕ್ಕೆ ಉರುಳಿತು. ಅದರ ಮೇಲೆ ಟಿಪ್ಪರ್ ಕೂಡ ಉರುಳಿತು. ಟ್ರ್ಯಾಕ್ಟರ್ ಚಾಲಕ ಖಡಿಗಳ ಮಧ್ಯೆ ಮುಚ್ಚಿಹೋದರು.

ಸ್ಥಳಕ್ಕೆ ಧಾವಿಸಿದ ಜನ ಖಡಿ ತೆರವು ಮಾಡಿ ಚಾಲಕನನ್ನು ರಕ್ಷಿಸಲು ಮುಂದಾದರು. ಅಷ್ಟರಲ್ಲಿ ಅವರು ಕೊನೆಯುಸಿರು ಎಳೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕ್ರೇನ್ ಸಹಾಯದಿಂದ ಎರಡೂ ವಾಹನಗಳನ್ನು ತೆರವು ಮಾಡಲಾಯಿತು. ಹಿರೇಬಾಗೇವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.


Spread the love

About Laxminews 24x7

Check Also

ಬೆಣ್ಣೆನಗರಿಗೆ ಬರಲಿದೆ ಐಟಿ ಪಾರ್ಕ್

Spread the loveದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಪ್ರಗತಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಐಟಿಬಿಟಿ ಕಂಪನಿಗಳು ಕರೆತರಲು ಇಲ್ಲಿಲ್ಲದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ