Breaking News

ಮಳೆಯಿಂದ ಮನೆ ಕಳೆದುಕೊಂಡಿದ್ದ ವೃದ್ಧೆಗೆ ದಾನಿಗಳಿಂದಲೇ ನಿರ್ಮಾಣವಾಗುತ್ತಿದೆ ಸೂರು

Spread the love

ಕುಷ್ಟಗಿ: ಕುಷ್ಟಗಿ ಪಟ್ಟಣದ 5ನೇ ವಾರ್ಡಿನಲ್ಲಿ ಮಳೆಯಿಂದ ವೃದ್ದೆಯ ಬಿದ್ದ ಮನೆಗೆ ಸರ್ಕಾರದಿಂದ ಜನಪ್ರತಿನಿಧಿಗಳಿಂದ ಸಿಗದ ನೆರವು ಹೆಸರು ಹೇಳಲಿಚ್ಚಸದ ದಾನಿಗಳಿಂದ ಸಿಕ್ಕಿದ್ದು ಮನೆಯ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿರುವ ಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ.

 

ಮನೆ ಮನೆಯಲ್ಲಿ ಮುಸುರಿ ತಿಕ್ಕಿಕೊಂಡು ಜೀವನೋಪಾಯ ಮಾಡಿಕೊಂಡಿದ್ದ ನೀಲಮ್ಮ ಹಾಬಲಕಟ್ಟಿ ವಯೋವೃದ್ದೆಗೆ ಪಾರ್ಶ್ವವಾಯುವಿಗೆ ತುತ್ತಾಗಿ ಮನೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಮನೆ ಮಳೆಗೆ ಮನೆ ಬಿದ್ದಿದ್ದು ಮಗ, ಸೊಸೆ ಹಾಗೂ ಈ ವೃದ್ದೆ ಸಮೇತ ಬೀದಿಗೆ ಬಿದ್ದಾಗಿದೆ. ಈ ಪರಿಸ್ಥಿತಿಯಲ್ಲಿ ತಹಶೀಲ್ದಾರ ಎಂ.ಗುರುರಾಜ್ ಚಲವಾದಿ ಅವರು ಬಿದ್ದ ಮನೆ ಪರಿಶೀಲಿಸಿದ್ದು, ಸರಿಯಾದ ದಾಖಲಾತಿ ಇಲ್ಲದ ಹಿನ್ನೆಲೆಯಲ್ಲಿ ಬಿದ್ದ ಮನೆಗೆ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ.

ಶಾಸಕ ಹಾಗೂ ವಾರ್ಡಿನ ಸದಸ್ಯರಿಂದ ಯಾವೂದೇ ಪರಿಹಾರ ಸಿಕ್ಕಿಲ್ಲ. ಈ ಪರಿಸ್ಥಿತಿಯಲ್ಲಿ ವೃದ್ದೆಯ ದಯನೀಯ ಸ್ಥಿತಿಗೆ ಮರುಗಿದ ದಾನಿಗಳು ತಮ್ಮ ಕೈಲಾದ ಸಹಾಯ ಮಾಡಿದ್ದರಿಂದ ಮನೆ ನಿರ್ಮಾಣ ಕೆಲಸ ಕಳೆದ ಸೋಮವಾರದಿಂದ ಶುರುವಾಗಿದೆ. ಯಾರದ್ದೋ ಜಾಗಯಲ್ಲಿ ನಡಗುವ ಚಳಿಯಲ್ಲಿ ತಾತ್ಕಾಲಿಕ ತಗಡಿನ ಶೆಡ್ ನಲ್ಲಿ ವಾಸವಾಗಿರುವ ಈ ಕುಟುಂಬಕ್ಕೆ ಕಾಣದ ಕೈಗಳ ನೆರವಿನಿಂದ ಕಟ್ಟಡ ಸಾಮಾಗ್ರಿ ಹಾಗೂ ಹೈದ್ರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆಯ ಸಹಾನುಭೂತಿಯಿಂದ ಅಂತು ಇಂತೂ ಮನೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ. ವಯೋವೃದ್ದೆಯ ಮನೆ ಸಂಪೂರ್ಣ ನಿರ್ಮಾಣವಾಗಲು ಸಾರ್ವಜನಿಕರ ಸಹಾಯಹಸ್ತ ಅಗತ್ಯವಾಗಿದೆ


Spread the love

About Laxminews 24x7

Check Also

ಜೈ ಕಿಸಾನ್ ಖಾಸಗಿ ಮಾರುಕಟ್ಟೆ ಬಂದ್! ಅಧಿಕಾರಿಗಳ ವಿರುದ್ಧ ಕ್ರಮ, ಬೆಳೆ ಹಾನಿ ಸಮೀಕ್ಷೆ ಕೂಡ ಶೀಘ್ರದಲ್ಲೇ.

Spread the love ಜೈ ಕಿಸಾನ್ ಖಾಸಗಿ ಮಾರುಕಟ್ಟೆ ಬಂದ್! ಅಧಿಕಾರಿಗಳ ವಿರುದ್ಧ ಕ್ರಮ, ಬೆಳೆ ಹಾನಿ ಸಮೀಕ್ಷೆ ಕೂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ