ಬೆಳಗಾವಿ: ‘ದೇಶದ ಗಡಿ ಕಾಯುವ ಸೈನಿಕರಿಗೆ ಸಾಹಿತಿ ನೀಲಗಂಗಾ ಚರಂತಿಮಠ ಅವರಿ ತಮ್ಮ ಕೃತಿಗಳಲ್ಲಿ ದೊಡ್ಡ ಗೌರವ ನೀಡಿದ್ದಾರೆ. ಇಂಥ ಪುಸ್ತಕಗಳಿಂದ ಸೈನಿಕರ ನೈತಿಕ ಸ್ಥೈರ್ಯ ಹೆಚ್ಚುತ್ತದೆ’ ಎಂದು ಕಮಾಂಡೆಂಟ್ ಪಿ.ಸಿ. ವಿಂಗ್‌ನ ಬ್ರಿಗೇಡಿಯರ್ ದಯಾಲನ್ ಹೇಳಿದರು.
ಸಾಹಿತಿ ನೀಲಗಂಗಾ ಚರಂತಿಮಠ ಅವರ ‘ಧಾರಿಣಿ’, ‘ಜನನಿ ಜನ್ಮಭೂಮಿ’, ‘ಒಂದೇ ಮಾತರಂ’ ಮತ್ತು ‘ಪ್ರಣಾಮ್’ ಎಂಬ ನಾಲ್ಕು ಪುಸ್ತಕಗಳನ್ನು ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಸ್.ಎಂ. ಗಂಗಾಧರಯ್ಯ ಅವರು ಕೃತಿಗಳ ಪರಿಚಯಿಸಿದರು.
ಹಿರಿಯ ಸಾಹಿತಿ, ಚಿಂತಕ ಬಿ.ಎಸ್. ಗವಿಮಠ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪ್ರೊ.ಎಂ.ಎಸ್. ಇಂಚಲ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ದಯಾಲನ್, ಎಂ.ಎಸ್. ಇಂಚಲ, ಜಿಲ್ಲಾ ಲೇಖಕಿಯರ ಸಂಘದ
ಅಧ್ಯಕ್ಷೆ ಜಯಶೀಲಾ ಬ್ಯಾಕೋಡ, ಸುನಂದಾ ಎಮ್ಮಿ ಅವರನ್ನು ಸತ್ಕರಿಸಲಾಯಿತು.
ದೀಪಿಕಾ ಚಾಟೆ ಸ್ವಾಗತಿಸಿದರು. ಭಾರತಿ ಮಠದ ಮತ್ತು ರಾಜನಂದ ಗಾರ್ಗಿ ಅತಿಥಿಗಳ ಪರಿಚಯ ಮಾಡಿದರು. ನೈನಾ ಗಿರಿಗೌಡರ ರಾಷ್ಟ್ರಗೀತೆ, ನಾಡಗೀತೆ ಪ್ರಸ್ತುತಪಡಿಸಿದರು. ಪ್ರತಿಭಾ ಕಳ್ಳಿಮಠ ವಂದೇ ಮಾತರಂ ಪ್ರಸ್ತುತಪಡಿಸಿದರು