Breaking News

18 ಕ್ಯಾರೆಟ್‌ ಚಿನ್ನದಿಂದ ಪ್ರಧಾನಿ ಮೋದಿ ಪ್ರತಿಮೆ

Spread the love

ಸೂರತ್‌: ಇತ್ತೀಚೆಗೆ ಜರುಗಿದ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ರಾಜ್ಯದ ಸೂರತ್‌ ನಗರದ ಜ್ಯುವೆಲ್ಲರಿ ಅಂಗಡಿಯ ಮಾಲೀಕರೊಬ್ಬರು 156 ಗ್ರಾಂ ತೂಕದ, 18 ಕ್ಯಾರೆಟ್‌ ಚಿನ್ನದಿಂದ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಮೆಯನ್ನು ತಯಾರಿಸಿದ್ದಾರೆ.

 

“ಕಳೆದ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಗುಜರಾತ್‌ನ 182 ಸ್ಥಾನಗಳ ಪೈಕಿ 156ರಲ್ಲಿ ಬಿಜೆಪಿ ಗೆಲುವು ಸಾಧಿಸಿತು. ನಾನು ಮೋದಿ ಅವರ ಅಭಿಮಾನಿಯಾಗಿದ್ದೇನೆ. ಅವರಿಗೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ 156 ಗ್ರಾಂ ತೂಕದ ಅವರ ಪ್ರತಿಮೆಯನ್ನು ತಯಾರಿಸಲಾಗಿದೆ.

ನಮ್ಮ ಕಾರ್ಖಾನೆಯಲ್ಲಿ 20 ಮಂದಿ ಕುಶಲಕರ್ಮಿಗಳು ಸುಮಾರು ಮೂರು ತಿಂಗಳಲ್ಲಿ ಈ ಪ್ರತಿಮೆ ತಯಾರಿಸಿದ್ದಾರೆ,’ ಎಂದು ರಾಧಿಕಾ ಚೈನ್ಸ್‌ ಮಾಲೀಕ ಬಸಂತ್‌ ಬೊಹ್ರಾ ತಿಳಿಸಿದ್ದಾರೆ. ಮೋದಿ ಅವರ ಚಿನ್ನದ ಪ್ರತಿಮೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.


Spread the love

About Laxminews 24x7

Check Also

ಕೆಜಿಎಫ್​ ನಟ ಹರೀಶ್​ ರಾಯ್ ಅಂತ್ಯಸಂಸ್ಕಾರ

Spread the loveಉಡುಪಿ: ‘ಕೆಜಿಎಫ್​​​ ಚಾಚಾ’ ಖ್ಯಾತಿಯ ಹರೀಶ್​ ರಾಯ್ (Harish Rai) ಅವರ ಅಂತ್ಯಕ್ರಿಯೆ ಇಂದು ಉಡುಪಿಯ ಅಂಬಲಪಾಡಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ