Home / ಜಿಲ್ಲೆ / ಬೆಳಗಾವಿ / ಬೆಳಗಾವಿಯಲ್ಲಿ ಉದ್ಯೋಗ ಮೇಳ | 38 ಕಂಪನಿ, 3,500 ಯುವಜನರು ಭಾಗಿ

ಬೆಳಗಾವಿಯಲ್ಲಿ ಉದ್ಯೋಗ ಮೇಳ | 38 ಕಂಪನಿ, 3,500 ಯುವಜನರು ಭಾಗಿ

Spread the love

ಬೆಳಗಾವಿ: ‘ಜಗತ್ತಿನಾದ್ಯಂತ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ, ಸೇವೆ ಮತ್ತು ಉತ್ಪಾದನಾ ವಲಯದಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ. ಆಕಾಂಕ್ಷಿಗಳು ಕಾಲಕ್ಕೆ ತಕ್ಕಂತೆ ಕೌಶಲ ಬೆಳೆಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ ನೀಡಿದರು.

 

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿ ಜೀವನದ ಬಳಿಕ ನಮ್ಮ ಹೆಸರಿನ ಜತೆ ನಮ್ಮ ಕೆಲಸ ಹಾಗೂ ಪದನಾಮ ಮಹತ್ವ ಪಡೆದುಕೊಳ್ಳುತ್ತದೆ. ಆದ್ದರಿಂದ ಆತ್ಮವಿಶ್ವಾಸ, ಕಠಿಣ ಪರಿಶ್ರಮದ ಮೂಲಕ ಒಳ್ಳೆಯ ಉದ್ಯೋಗ ಪಡೆದುಕೊಳ್ಳಬೇಕು’ ಎಂದರು.

‘ವಿಜಯಪುರ ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತರೂ ನಿರಂತರ ಪ್ರಯತ್ನದ ಫಲವಾಗಿ ನಾಗರಿಕ ಸೇವಾ ಹುದ್ದೆ ಪಡೆಯಲು ನನಗೆ ಸಾಧ್ಯವಾಯಿತು. ವಿವಿಧ ಸರ್ಕಾರಿ ನೌಕರಿ, ಖಾಸಗಿ ಕಂಪೆನಿ, ವಿದೇಶದ ಅವಕಾಶಗಳು ಸಿಕ್ಕರೂ ನನ್ನ ಗುರಿಯಿಂದ ನಾನು ಹಿಂದೆ ಸರಿಯಲಿಲ್ಲ. ಅದರ ಫಲವಾಗಿ ಈಗ ಜಿಲ್ಲಾಧಿಕಾರಿ ಆಗಿದ್ದೇನೆ’ ಎಂದು ಅವರು ತಮ್ಮ ಉದಾಹರಣೆ ನೀಡಿದರು.

38 ಕಂಪನಿಗಳು ಭಾಗಿ:

‘ಉದ್ಯೋಗ ಮೇಳದಲ್ಲಿ 38 ಕಂಪನಿಗಳು ಭಾಗವಹಿಸಿದ್ದು, 3,500 ಯುವಜನರು ನೋಂದಣಿ ಮಾಡಿಸಿದ್ದಾರೆ. ಎಲ್ಲರಿಗೂ ಉದ್ಯೋಗ ದೊರೆಯದಿದ್ದರೂ ಅನುಭವ ಆಗಲಿದೆ’ ಎಂದರು.

‘ಸದ್ಯಕ್ಕೆ ಶೇ 25ರಷ್ಟು ಪದವೀಧರರು ಮಾತ್ರ ನೇರವಾಗಿ ಉದ್ಯೋಗ ಪಡೆಯಬಲ್ಲರು. ಉಳಿದ ಶೇ 75ರಷ್ಟು ಪದವೀಧರರು ಕೌಶಲ ಬೆಳೆಸಿಕೊಳ್ಳುವ ಅಗತ್ಯವಿದೆ. ಆದ್ದರಿಂದ ಎಲ್ಲಿಯೇ ಉದ್ಯೋಗ ಮೇಳ ನಡೆದರೂ ಭಾಗವಹಿಸಿ. ಉದ್ಯೋಗ ದೊರೆತ ನಂತರವೂ ಉನ್ನತ ಹುದ್ದೆ ಪಡೆಯಲು ನಿರಂತರವಾಗಿ ಪ್ರಯತ್ನಿಸಿ’ ಎಂದರು.

ಜಿಲ್ಲಾ ಖಜಾನೆಯ ಜಂಟಿ ನಿರ್ದೇಶಕ ಸುರೇಶ್ ಹಲ್ಯಾಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಾ.ಬಸವಪ್ರಭು ಹಿರೇಮಠ, ಸಹಾಯಕ ನಿಯಂತ್ರಕಿ ಶಿಲ್ಪಾ ವಾಲಿ, ಮರಾಠಾ ಮಂಡಲದ ಕಲಾ, ವಿಜ್ಞಾನ ಹಾಗೂ ಗೃಹವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಗಜಾನನ ಬೆನ್ನಾಳಕರ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ‌ ನಿರ್ದೇಶಕ ಗುರುಪಾದಯ್ಯ ಹಿರೇಮಠ ಇದ್ದರು.

ಟಾಟಾ ಕ್ಯಾಪಿಟಲ್, ಐಸಿಐಸಿ ಬ್ಯಾಂಕ್, ಅದಾನಿ ಕ್ಯಾಪಿಟಲ್, ಪೇಟಿಎಂ ಪ್ರೈವೇಟ್‌ ಲಿ., ಬೈಜೂಸ್, ಆಶೋಕ್ ಐರನ್ ಗ್ರುಪ್ ಸೇರಿದಂತೆ 38 ಕಂಪನಿಗಳು ಮೇಳದಲ್ಲಿ ಪಾಲ್ಗೊಂಡವು


Spread the love

About Laxminews 24x7

Check Also

ನೂತನ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರ ಸ್ವೀಕಾರ

Spread the love ಬೆಳಗಾವಿ: ಬೆಳಗಾವಿಯ ನೂತನ ಜಿಲ್ಲಾಧಿಕಾರಿಯಾಗಿ ಮೊಹಮ್ಮದ್ ರೋಷನ್ ಶುಕ್ರವಾರ ಅಧಿಕಾರ ವಹಿಸಿಕೊಂಡರು. ನಿಕಟಪೂರ್ವ ಜಿಲ್ಲಾಧಿಕಾರಿ ನಿತೇಶ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ