Breaking News
Home / ರಾಜಕೀಯ / ಟೆಲಿಕಾಂ ಗ್ರಾಹಕರಿಗೆ ಶಾಕಿಂಗ್​ ಸುದ್ದಿ! ರೀಚಾರ್ಜ್​ ಬೆಲೆ ಏರಿಕೆ ಮಾಡಿದ ಕಂಪೆನಿ

ಟೆಲಿಕಾಂ ಗ್ರಾಹಕರಿಗೆ ಶಾಕಿಂಗ್​ ಸುದ್ದಿ! ರೀಚಾರ್ಜ್​ ಬೆಲೆ ಏರಿಕೆ ಮಾಡಿದ ಕಂಪೆನಿ

Spread the love

ಭಾರತದಲ್ಲಿ ಟೆಲಿಕಾಂ ಕಂಪೆನಿಗಳು (Telecom Company) ಇತ್ತೀಚೆಗೆ ಭಾರೀ ಮುಂಚೂಣಿಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ಕಂಪೆನಿಗಳು ನೀಡುತ್ತಿರುವ ರೀಚಾರ್ಜ್​ ಯೋಜನೆಗಳು ಅಂತಾನೇ ಹೇಳ್ಬಹುದು. ಈ ಟೆಲಿಕಾಂ ಕಂಪೆನಿಗಳು ವರ್ಷದಿಂದ ವರಷಕ್ಕೆ ಹೊಸ ಹೊಸ ರೀಚಾರ್ಜ್​ ಯೋಜನೆಗಳನ್ನು (Recharge Plans) ಪರಿಚಯಿಸುತ್ತಿರುತ್ತದೆ.

ಇನ್ನು ದೇಶದಲ್ಲಿರುವಂತಹ ಟೆಲಿಕಾಂ ಕಂಪೆನಿಗಳು ಅಭಿವೃದ್ಧಿಯ ಸ್ಥಾನಗಳ ಬಗ್ಗೆ ಹೇಳುವುದಾದರೆ ಜಿಯೋ (Jio) ಮೊದಲ ಸ್ಥಾನದಲ್ಲಿದೆ. ಅದೇ ರೀತಿಯಲ್ಲಿ ಏರ್​​ಟೆಲ್​ ಟೆಲಿಕಾಂ ಕಂಪೆನಿಗಳಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಗೂ ವೊಡಫೋನ್ ಐಡಿಯಾ ಕಂಪೆನಿ ಮೂರನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಇದೀಗ ಇ ಕಂಪೆನಿಗಳು ತನ್ನ ಗ್ರಾಹಕರಿಗೆ ಶಾಕಿಂಗ್​ ಸುದ್ದಿಯೊಂದನ್ನು ನೀಡಿದೆ.

ಟೆಲಿಕಾಂ ಕಂಪೆನಿಗಳು ಗ್ರಾಹಕರು ಪಡೆಯುತ್ತಿರುವ ಪ್ರಯೋಜನಗಳನ್ನು ಲೆಕ್ಕ ಹಾಕಿದರೆ ಕಂಪೆನಿಗಳು ಪಡೆಯುತ್ತಿರುವ ಸರಾಸರಿ ಆದಾಯ ಬಹಳಷ್ಟು ಅಗ್ಗದಲ್ಲಿದೆ ಎಂದು ಹೇಳಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ರೀಚಾರ್ಜ್​ನ ಬೆಲೆ ಇನ್ನಷ್ಟು ಏರಿಕೆಯಾಗಲಿದೆ ಎಂದು ಕಂಪೆನಿಗಳು ಹೇಳಿವೆ.

ಟೆಲಿಕಾಂ ಕಂಪೆನಿಗಳು ಪಡೆಯುತ್ತಿರುವ ಸರಾಸರಿ ಆದಾಯ

ಭಾರತೀಯ ಟೆಲಿಕಾಂ ಕಂಪೆನಿಗಳಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿಕೊಂಡು ಜಿಯೋ ಮಂಚೂಣಿಯಲ್ಲಿದ್ದರೂ, ಏರ್​ಟೆಲ್​ ಆದಾಯ ಗಳಿಕೆಯಲ್ಲಿ ಮಾತ್ರ ಮುಂಚೂಣಿಯಲ್ಲಿದೆ. ದೇಶದ ಟೆಲಿಕಾಂ ಗ್ರಾಹಕರಿಂದ ಹೆಚ್ಚು ಲಾಭವನ್ನು ಗಳಿಸುವ ಮೂಲಕ ಏರ್​​ಟೆಲ್​ ಈ ಸ್ಥಾನವನ್ನು ಗಳಿಸಿಕೊಂಡಿದೆ.

ಇನ್ನು ಈ ಕಂಪೆನಿಗಳ ಮಾಸಿಕ ಆದಾಯ ಗಳಿಕೆಯ ಬಗ್ಗೆ ಹೇಳುವುದಾದರೆ, ಕಳೆದ ತ್ರೈಮಾಸಿಕದ ಸಮೀಕ್ಷೆಯ ಪ್ರಕಾರ, ಏರ್​ಟೆಲ್​​ ಪ್ರತೀ ತಿಂಗಳು ಬಳಕೆದಾರರಿಂದ ಪಡೆಯುತ್ತಿರುವ ಆದಾಯ 190 ರೂಪಾಯಿ ಆಗಿದೆ. ಅದೇ ರೀತಿ ರಿಲಯನ್ಸ್​ ಜಿಯೋ 177.2 ರೂಪಾಯಿ ಹಾಗೂ ಟೆಲಿಕಾಂ ಕಂಪೆನಿಗಳಲ್ಲಿ ಮೂರನೇ ಸ್ಥಾನವನ್ನು ಪಡೆದಿರುವ ವೊಡಫೋನ್​ ಐಡಿಯಾ ತಿಂಗಳಿಗೆ 131 ರೂಪಾಯಿಯಷ್ಟು ಆದಾಯವನ್ನು ಗಳಿಸುತ್ತದೆ.

ಏರ್​​ಟೆಲ್​ನ ರೀಚಾರ್ಜ್​ ಬೆಲೆಯಲ್ಲಿ ಏರಿಕೆ

ಇದುವರೆಗೆ ಏರ್​ಟೆಲ್​ನಲ್ಲಿ 200 ರೂಪಾಯಿಗೆ ಹತ್ತಿರವಿದ್ದಂತಹ ರೀಚಾರ್ಜ್​ ಬೆಲೆಯನ್ನು 300 ರೂಪಾಯಿಗಳವರೆಗೆ ಏರಿಕೆ ಮಾಡುವುದಾಗಿ ಗುರಿಯನ್ನು ಇಟ್ಟುಕೊಂಡಿದೆ. ಇದರ ಜೊತೆಗೆ ಇನ್ನು ಬೇರೆ ಕಂಪೆನಿಗಳು ಸಹ ತನ್ನ ರೀಚಾರ್ಜ್​ ಬೆಲೆಗಳನ್ನು ಏರಿಕೆ ಮಾಡುವುದು ಖಚಿತವಾಗಿದೆ.


Spread the love

About Laxminews 24x7

Check Also

ಬಾಡಿ ಬಿಲ್ಡ್ ಮಾಡಿ ಯುವತಿಯರ ಮುಂದೆ ಪ್ರದರ್ಶಿಸುತ್ತಿದ್ದ ಯುವಕನಿಗೆ ಪೊಲೀಸರ ವರ್ಕೌಟ್

Spread the loveಬೆಳಗಾವಿ: ಜಿಮ್ ಹೋಗೋದು, ವ್ಯಾಯಾಮ, ಕಸರತ್ತು ಮಾಡಿ ದೇಹವನ್ನು ಸಾಮು ಮಾಡಿಕೊಳ್ಳುವುದು ತಪ್ಪಲ್ಲ. ಅದರೆ ನಾನು ದೇಹವನ್ನು ಸಾಮು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ