Breaking News

ಇಂದು ಸಂಜನಾ 31ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಜೈಲಿನಲ್ಲೇ ಹುಟ್ಟುಹಬ್ಬ

Spread the love

ಬೆಂಗಳೂರು: ಇಂದು ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಹುಟ್ಟುಹಬ್ಬ. ಆದರೆ ಈ ಬಾರಿ ಸಂಜನಾ ಪರಪ್ಪನ ಅಗ್ರಹಾರ ಜೈಲಿನಲ್ಲೇ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಬೇಕಾಗಿದೆ.‘

ಗಂಡ ಹೆಂಡತಿ’ ಬೆಡಗಿಯ ವಿಶೇಷ ದಿನಕ್ಕೆ ಡ್ರಗ್ಸ್ ಮಾಫಿಯಾ ಕಾವು ತಟ್ಟಿದೆ. ಜೈಲಿನಲ್ಲಿರುವ ಸಂಜನಾಗೆ ಈ ಬಾರಿಯ ಹುಟ್ಟುಹಬ್ಬದ ಸಂಭ್ರಮವಿಲ್ಲ. ಇಂದು ಸಂಜನಾ 31ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಸಂಜನಾ ಮನೆಯವರ ಜೊತೆಗಿಲ್ಲ.ಸಾಮಾನ್ಯವಾಗಿ ಸಂಜನಾ ತಮ್ಮ ಹುಟ್ಟುಹಬ್ಬಕ್ಕೂ ಎರಡು ದಿನದ ಮುಂಚೆಯೇ ಬರ್ತ್ ಡೇ ಸೆಲೆಬ್ರೇಷನ್‍ನಲ್ಲಿ ಬ್ಯುಸಿಯಾಗುತ್ತಿದ್ದರು. ಪ್ರತಿವರ್ಷ ಸಂಜನಾ ಹುಟ್ಟುಹಬ್ಬಕ್ಕಾಗಿ ನಟಿಯ ಆಪ್ತ ರಾಹುಲ್ ಅದ್ಧೂರಿಯಾಗಿ ಪಾರ್ಟಿಯನ್ನು ಏರ್ಪಡಿಸುತ್ತಿದ್ದ. ಆದರೆ ಇಂದು ರಾಹುಲ್ ಕೂಡ ಜೈಲಿನಲ್ಲಿದ್ದು, ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಲು ಕೂಡ ಸಾಧ್ಯವಾಗಿಲ್ಲ.

ಕಳೆದ ವರ್ಷ ಬೆಂಗಳೂರು ಹಾಗೂ ಮುಂಬೈನಲ್ಲಿ ಸಂಜನಾ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದರು. ಅಲ್ಲದೇ ಕಳೆದ ಬಾರಿಯ ಸಂಜನಾ ಬರ್ತ್ ಡೇ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಆದರೆ ಈ ಬಾರಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಸಂಜನಾ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಬೇಕಾಗಿದೆ.

ಕಳೆದ ಒಂದೂವರೆ ತಿಂಗಳಿಂದ ಜೈಲಿನಲ್ಲಿರುವ ನಟಿಯರಾದ ಸಂಜನಾ ಮತ್ತು ರಾಗಿಣಿಗೆ ಶುಕ್ರವಾರ ಕೂಡ ಜಾಮೀನು ಸಿಗಲಿಲ್ಲ. ಬದಲಿಗೆ ಇಬ್ಬರು ನಟಿಯರ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆ ಆಗಿದೆ. ಅಕ್ಟೋಬರ್ 23ರವರೆಗೆ ರಾಗಿಣಿ, ಸಂಜನಾ ನ್ಯಾಯಾಂಗ ಬಂಧನ ವಿಸ್ತರಿಸಿ ಎನ್‍ಡಿಪಿಎಸ್ ವಿಶೇಷ ಕೋರ್ಟ್ ಆದೇಶ ನೀಡಿದೆ.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ