Breaking News
Home / ರಾಜಕೀಯ / ಹೋಂಗಾರ್ಡ್ ವರ್ಗಾವಣೆಗೆ ಲಂಚ: ಕೊಪ್ಪಳ ಜಿಲ್ಲಾ ಕಮಾಂಡೆಂಟ್ ಲೋಕಾಯುಕ್ತ ಬಲೆಗೆ

ಹೋಂಗಾರ್ಡ್ ವರ್ಗಾವಣೆಗೆ ಲಂಚ: ಕೊಪ್ಪಳ ಜಿಲ್ಲಾ ಕಮಾಂಡೆಂಟ್ ಲೋಕಾಯುಕ್ತ ಬಲೆಗೆ

Spread the love

ಕೊಪ್ಪಳ: ಹೋಂಗಾರ್ಡ್ ಒಬ್ಬರ ವರ್ಗಾವಣೆಗೆ 10 ಸಾವಿರ ರೂ. ಲಂಚದ ಬೇಡಿಕೆಯನ್ನಿಟ್ಟಿದ್ದ ಜಿಲ್ಲಾ ಕಮಾಂಡೆಂಟ್ ಗವಿಸಿದ್ದಪ್ಪ ಹಾಗೂ ತಾಲೂಕು ಕಮಾಂಡೆಂಟ್ ರುದ್ರಪ್ಪ ಪತ್ತಾರ್ ಅವರು ನಗರದ ಮಾನಸಿಕ ಆರೋಗ್ಯ ತಪಾಸಣಾ ಕಚೇರಿಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

 

ತಾಲೂಕಿನ ಮುನಿರಾಬಾದ್‌ ನ ಹೋಂಗಾರ್ಡ್ ಮಹೆಬೂಬ ಖಾನ್ ಅವರು ಮುನಿರಾಬಾದ್‌ನಿಂದ ಗಂಗಾವತಿಗೆ ವರ್ಗಾವಣೆ ಕೇಳಿಕೊಂಡಿದ್ದರು. ಇದಕ್ಕೆ ರುದ್ರಪ್ಪ ಪತ್ತಾರ ಹಾಗೂ ಗವಿಸಿದ್ದಪ್ಪ ಅವರು 10 ಸಾವಿರ ರೂ. ಹಣದ ಬೇಡಿಕೆ ಇಟ್ಟಿದ್ದರು. ಇದರಿಂದ ಮಹೆಬೂಬ್ ಖಾನ್ ಲೋಕಾಯುಕ್ತರಿಗೆ ದೂರು ನೀಡಿದ್ದರು.

ಲೋಕಾಯುಕ್ತರ ತಂಡವು ನಗರದ ಮಾನಸಿಕ ಆರೋಗ್ಯ ತಪಾಸಣಾ ಕೇಂದ್ರದಲ್ಲಿ ಕರ್ತವ್ಯ ನಿರತ ಜಿಲ್ಲಾ ಕಮಾಂಡಂಟ್ ಗವಿಸಿದ್ದಪ್ಪ 6 ಸಾವಿರ ರೂ. ಹಣ ಸ್ವೀಕರಿಸುವ ವೇಳೆ ದಾಳಿ ನಡೆಸಿ ಬಲೆಗೆ ಕೆಡವಿದೆ. ಜಿಲ್ಲಾ ಹಾಗೂ ತಾಲೂಕು ಹೋಂ ಗಾರ್ಡ್ ಕಂಮಾಂಡೆಂಟ್‌ಗಳ ಮೇಲೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗಿದೆ.

ದಾಳಿಯ ವೇಳೆ ಲೋಕಾಯುಕ್ತ ಅಧಿಕಾರಿಗಳಾದ ಡಿಎಸ್‌ಪಿ ಸಲೀಂ ಪಾಷಾ, ಇನ್ಪೆಕ್ಟರ್‌ಗಳಾದ ಚಂದ್ರಪ್ಪ ಇ.ಟಿ, ರಾಜೇಶ ಬಲಗುರ್ಕಿ, ಗಿರೀಶ ಶಿರೋಳ್ಕರ್ ಸೇರಿ ಸಿಬ್ಬಂದಿ ವರ್ಗವು ದಾಳಿ ನಡೆಸಿತು.


Spread the love

About Laxminews 24x7

Check Also

ಬಾಡಿ ಬಿಲ್ಡ್ ಮಾಡಿ ಯುವತಿಯರ ಮುಂದೆ ಪ್ರದರ್ಶಿಸುತ್ತಿದ್ದ ಯುವಕನಿಗೆ ಪೊಲೀಸರ ವರ್ಕೌಟ್

Spread the loveಬೆಳಗಾವಿ: ಜಿಮ್ ಹೋಗೋದು, ವ್ಯಾಯಾಮ, ಕಸರತ್ತು ಮಾಡಿ ದೇಹವನ್ನು ಸಾಮು ಮಾಡಿಕೊಳ್ಳುವುದು ತಪ್ಪಲ್ಲ. ಅದರೆ ನಾನು ದೇಹವನ್ನು ಸಾಮು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ