Breaking News

ಪ್ರೀತಿಸಿದ ಹುಡುಗನನ್ನು ತೋಟಕ್ಕೆ ಕರೆದೊಯ್ದು ಕೈ ಕಾಲು ಕಟ್ಟಿ ಕಬ್ಬಿಣದ ರಾಡ್‌ನಿಂದ ಹಲ್ಲೆ

Spread the love

ವಿಜಯಪುರ: ಪ್ರೀತಿಸಿದ, ಸಲುಗೆಯಿಂದಿದ್ದ ಹುಡುಗಿಯಿಂದ ದೂರವಿದ್ದರೂ ಹುಡುಗನನ್ನು ತೋಟಕ್ಕೆ ಕರೆದೊಯ್ದು ಕೈ ಕಾಲು ಕಟ್ಟಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.

ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜ.

9ರಂದೇ ಈ ಘಟನೆ ನಡೆದಿದ್ದು ಜಿಲ್ಲಾಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಯುವಕನ ಅಣ್ಣ ಜ. 12ರಂದು ತಿಕೋಟಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನೀಲ ಬಾಬು ಜೊಲ್ಲಿ (23) ಎಂಬಾತ ಹಲ್ಲೆಗೆ ಒಳಗಾದ ಯುವಕ. ಅದೇ ಗ್ರಾಮದ ಬಾಳಪ್ಪ ಮುಕುಂದ ಕ್ಯಾತನ್‌, ರಾಘವೇಂದ್ರ ಬಾಳಪ್ಪ ಕ್ಯಾತನ, ದೀಪಕ ಧರೆಪ್ಪಕ್ಯಾತನ ಹಾಗೂ ಸುಚೀತ ಅಶೀಕ ಅವಧಿ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ:
ಸುನೀಲ ಐಟಿಐ ಕಲಿತಿದ್ದು ತನ್ನದೇ ಓಣಿಯ ಸ್ವಪ್ನಾ ಬಾಳಪ್ಪ ಕ್ಯಾತನ ಎಂಬುವಳೊಂದಿಗೆ ಪ್ರೀತಿ ಮಾಡಿ ಸಲುಗೆಯಿಂದ ಇದ್ದನು. ಈ ಬಗ್ಗೆ ಅವಳ ಮನೆಯವರು ಸುನೀಲಗೆ ಹಿರಿಯ ಮುಖಾಂತರ ಎಚ್ಚರಿಕೆ ನೀಡಿದ್ದರು. ಸ್ವಪ್ನಾಳ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳದಂತೆ ತಾಕೀತು ಮಾಡಿದ್ದರು. ಆ ಪ್ರಕಾರ ಸುನೀಲ ಕೂಡ ದೂರ ಇದ್ದನು. ಆದರೂ, ಸ್ವಪ್ನಾಳ ಮನೆಯವರು ಸುನೀಲಗೆ ಹೊಡೆದು ಖಲಾಸ್‌ ಮಾಡುತ್ತೇವೆಂದು ತಿರುಗಾಡುತ್ತಿದ್ದರು.

ಕೈಕಾಲು ಕಟ್ಟಿ ಹಲ್ಲೆ:
ಜ. 9ರಂದು ಓಣಿಯ ಸಚಿನ ಅಶೋಕ ಅವಧಿ ಎಂಬಾತ ಸುನೀಲನನ್ನು ಪೆಟ್ರೋಲ್‌ ತೆಗೆದುಕೊಂಡು ಬರೋಣ ಬಾ ಎಂದು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಬಾಳಪ್ಪ ಮುಕುಂದು ಕ್ಯಾತನ್‌, ರಾಘವೇಂದ್ರ ಬಾಳಪ್ಪ ಕ್ಯಾತನ್‌ ಹಾಗೂ ದೀಪಕ ಧರೆಪ್ಪ ಕ್ಯಾತನ ಇವರು ಮೋಟರ್‌ ಸೈಕಲ್‌ ಮೇಲೆ ಬಂದು ಸುನೀಲನನ್ನು ಅಡ್ಡಗಟ್ಟಿ ಆತನನ್ನು ಕರೆದುಕೊಂಡು ಮಹೇಶ ಕ್ಯಾತನ ತೋಟಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಸುನೀಲಗೆ ಕೈಕಾಲು ಕಟ್ಟಿ ಕಬ್ಬೀಣದ ರಾಡ್‌ನಿಂದ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಬಳಿಕ ಸುನೀಲನನ್ನು ಆತನ ಮನೆಗೆ ತಂದು ಬಿಟ್ಟಿದ್ದು, ಗಾಯಗೊಂಡ ಸುನೀಲನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತಿಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ