Home / ರಾಜಕೀಯ / 86ನೇ ನುಡಿ ಜಾತ್ರೆಗೆ ಏಲಕ್ಕಿ ನಗರಿ ಝಗಮಗ

86ನೇ ನುಡಿ ಜಾತ್ರೆಗೆ ಏಲಕ್ಕಿ ನಗರಿ ಝಗಮಗ

Spread the love

ಹಾವೇರಿ: 86ನೇ ನುಡಿ ಜಾತ್ರೆಗೆ ಸಿದ್ಧಗೊಂಡಿರುವ ಏಲಕ್ಕಿ ಕಂಪಿನ ನಾಡು ಹಾವೇರಿಯಲ್ಲಿ ಹಳದಿ, ಕೆಂಪು ಬಾವುಟಗಳು ರಾರಾಜಿಸುತ್ತಿವೆ. ನಗರದಾದ್ಯಂತ ಮೈಸೂರು ದಸರಾ ಮಾದರಿ ದೀಪಾಲಂಕಾರ ಮಾಡಿದ್ದು, ಪ್ರಮುಖ ವೃತ್ತ, ರಸ್ತೆ ಮತ್ತು ಕಟ್ಟಡಗಳು ವಿವಿಧ ಬಣ್ಣಗಳ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

 

ನಗರದ ಹೊಸಮನಿ ಸಿದ್ದಪ್ಪ ವೃತ್ತ, ರಾಣಿ ಚನ್ನಮ್ಮ ವೃತ್ತ, ವಾಲ್ಮೀಕಿ ವೃತ್ತ, ಸುಭಾಷ್‌ ಸರ್ಕಲ್‌, ಅಂಬೇಡ್ಕರ್‌ ಸರ್ಕಲ್‌, ಗಾಂ ಧಿ ಸರ್ಕಲ್‌, ಬಸವೇಶ್ವರ ಸರ್ಕಲ್‌, ಜೆ.ಎಚ್‌.ಪಟೇಲ್‌ ವೃತ್ತ, ಎಂಎಂ ಸರ್ಕಲ್‌, ಜೆಪಿ ಸರ್ಕಲ್‌, ಸಂಗೂರ ಕರಿಯಪ್ಪ ಸರ್ಕಲ್‌ ಸೇರಿದಂತೆ ಮುಂತಾದ ವೃತ್ತಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಅಲ್ಲದೇ, ಹಳದಿ, ಕೆಂಪು ಬಟ್ಟೆಗಳನ್ನು ಅಳವಡಿಸಿ ನಗರವನ್ನು ಶೃಂಗರಿಸಲಾಗಿದೆ.

ಕೆಇಬಿ ಸರ್ಕಲ್‌ನಿಂದ ಹುಬ್ಬಳ್ಳಿ ರೋಡ್‌ ಬೈಪಾಸ್‌ವರೆಗೆ ಹಳೆ ಪಿ.ಬಿ. ರಸ್ತೆ, ಎಂ.ಜಿ. ರಸ್ತೆ, ಗುತ್ತಲ ರಸ್ತೆ ಮಾರ್ಗ, ತೋಟದ ಯಲ್ಲಾಪುರ ಮಾರ್ಗ, ಹಾನಗಲ್ಲ ಬೈಪಾಸ್‌ವರೆಗೆ, ಕಾಗಿನೆಲೆ ಬೈಪಾಸ್‌, ಜಿಲ್ಲಾ ಧಿಕಾರಿಗಳ ಕಚೇರಿ ರಸ್ತೆ ಮಾರ್ಗ, ಹಳೆ ಅಂಚೆ ಕಚೇರಿ ಮಾರ್ಗ, ಎಂಪಿಎಂಸಿ ಮಾರ್ಗ ಸೇರಿದಂತೆ ನಗರದ ಪ್ರಮುಖ ರಸ್ತೆ ಮಾರ್ಗಗಳಲ್ಲಿ ವಿದ್ಯುತ್‌ ದೀಪಗಳು ಝಗಮಗಿಸುತ್ತಿವೆ.


Spread the love

About Laxminews 24x7

Check Also

ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು

Spread the love ಮಹಾಲಿಂಗಪುರ: ರೈತ ಸಮುದಾಯವು ಜಾಣತನದಿಂದ ಒಕ್ಕಲುತನ ಮಾಡಿದರೆ ಕಡಿಮೆ ಜಮೀನು, ಅಲ್ಪಾವಧಿಯಲ್ಲಿಯೇ ಲಾಭವನ್ನು ಮಾಡಿಕೊಳ್ಳಬಹುದು ಎಂಬುದನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ