ಬೆಂಗಳೂರು: ಸುಮ್ಮನೆ ಫೋನ್ ಮಾಡಿ ಉಪದ್ರವ ನೀಡುವುದು, ಹುಸಿ ಮತ್ತು ಸೈಲೆಂಟ್ ಕರೆಗಳು, ಮಕ್ಕಳು ಆಟ ಆಡುತ್ತ ಮಾಡುವ ಫೋನ್ ಕರೆಗಳು…!
-ಇವು ‘ಆರೋಗ್ಯ ಕವಚ- 108′ ಕಾಲ್‌ಸೆಂಟರ್‌ಗೆ ಬರುವ ಕರೆಗಳು.
ತುರ್ತು ಆರೋಗ್ಯ ಸೇವೆಗಾಗಿ ರಾಜ್ಯದ ನಾನಾ ಭಾಗಗಳಿಂದ ‘108′ ಆಯಂಬುಲೆನ್ಸ್ ಗೆ ನಿತ್ಯವೂ ಬರುವ ಕರೆಗಳಲ್ಲಿ ಇಂತಹ ಅನುಪಯುಕ್ತ ಕರೆಗಳ ಕಿರಿಕಿರಿ ತಲೆನೋವಾಗಿದೆ.
ಪ್ರತಿದಿನ ಬರುವ ನೂರಾರು ಕರೆಗಳ ಪೈಕಿ ಅರ್ಧಕ್ಕರ್ಧ ಕರೆಗಳು ತುರ್ತು ಅಲ್ಲದ ಅಥವಾ ನಿರುಪ ಯೋಗಿ ಕರೆಗಳು. ಇವುಗಳನ್ನು ಸ್ವೀಕರಿ ಸುವಂತಿಲ್ಲ; ನಿರ್ಲಕ್ಷಿಸುವಂತೆಯೂ ಇಲ್ಲ.
ಶೇ. 44ರಷ್ಟು ಈ ಮಾದರಿಯ ಕರೆಗಳಲ್ಲಿ ಬಹುತೇಕ ಸೈಲೆಂಟ್ ಕರೆಗಳು (ಫೋನ್ ಮಾಡಿ ಹಾಗೇ ಇಡುವುದು), ಸುಳ್ಳು ಕರೆಗಳು, ಉಪದ್ರವ ಕರೆಗಳು, ಮಕ್ಕಳ ಕರೆಗಳು, ಸೇವೆಯ ಪ್ರಶಂಸೆ, ಸಿಬಂದಿ ಬಗ್ಗೆ ಕಾಳಜಿ ತೋರುವವು ಆಗಿರುತ್ತವೆ. ಇದರಿಂದ ತುರ್ತು ಸಹಾಯವಾಣಿಗೆ ಹೊರೆಯಾಗುವುದರ ಜತೆಗೆ ತುರ್ತು ಸಹಾಯದ ಅಗತ್ಯವಿರುವವರಿಗೆ ಸ್ಪಂದಿಸಲು ವಿಳಂಬವಾಗುತ್ತಿದೆ.
ಜನರಿಗೆ ತುರ್ತುರಹಿತ ಕರೆ ಸಂಖ್ಯೆ ನೀಡ ದಿರುವುದು ಸಮಸ್ಯೆಗೆ ಕಾರಣ. ಎಮರ್ಜೆನ್ಸಿ ರೆಸ್ಪಾನ್ಸ್ ಸೆಂಟರ್ ಫಿಸಿಶಿಯನ್(ಇಆರ್‌ಸಿಪಿ)ಗಳು ಮತ್ತು ಎಮರ್ಜೆನ್ಸಿ ರೆಸ್ಪಾನ್ಸ್ ಆಫೀ ಸರ್ (ಇಆರ್‌ಒ) ಜತೆಗಿನ ಸಂವಹನಕ್ಕೆ 108 ಬಳಕೆ ಆಗುತ್ತಿದೆ. ಪ್ರತ್ಯೇಕ ಸಂಪರ್ಕ ಸಂಖ್ಯೆ ನೀಡಿದ್ದರೂ ಜನರು ಇದೇ ಸಂಖ್ಯೆ ಬಳಸುತ್ತಿದ್ದಾರೆ.
Laxmi News 24×7