Breaking News

ಕರ್ನಾಟಕದ ಒಬ್ಬರು ಸೇರಿ ಐವರಲ್ಲಿ ಎಕ್ಸ್‌ಬಿಬಿ.1.5 ತಳಿ ದೃಢ

Spread the love

ಹೊಸದಿಲ್ಲಿ: ಅಮೆರಿಕದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರುವ ಕೊರೊನಾ ರೂಪಾಂತರಿ ಎಕ್ಸ್‌ಬಿಬಿ.1.5 ತಳಿಯು ಭಾರತದ 5 ಮಂದಿಯಲ್ಲಿ ದೃಢಪಟ್ಟಿದ್ದು, ಈ ಪೈಕಿ ಕರ್ನಾಟಕದ ಒಬ್ಬ ವ್ಯಕ್ತಿಯೂ ಸೇರಿದ್ದಾರೆ ಎಂದು ಇಂಡಿಯನ್‌ ಸಾರ್ಸ್‌ ಕೋವ್‌-2 ಜಿನೋಮಿಕ್ಸ್‌ ಕನ್ಸೋರ್ಟಿಯಮ್‌ ತಿಳಿಸಿದೆ.

 

ಸೋಂಕು ದೃಢಪಟ್ಟಿರುವ ಐವರಲ್ಲಿ ಮೂವರು ಗುಜರಾತ್‌ ಮೂಲದವರಾಗಿದ್ದು, ಕರ್ನಾಟಕ ಹಾಗೂ ರಾಜಸ್ಥಾನದ ತಲಾ ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

ಎಕ್ಸ್‌ಬಿಬಿ.1.5 ತಳಿಯು ಒಮಿಕ್ರಾನ್‌ ರೂಪಾಂತರಿಯ ಉಪ ತಳಿಗಳಾದ ಬಿಎ.2.10.1 ಹಾಗೂ ಬಿಎ.2.75 ತಳಿಗಳ ಸಮ್ಮಿಶ್ರ ತಳಿಯಾಗಿದೆ. ಎಕ್ಸ್‌ಬಿಬಿ ಹಾಗೂ ಎಕ್ಸ್‌ಬಿಬಿ.1.5 ತಳಿಗಳು ಅಮೆರಿಕದಲ್ಲಿ ಕೊರೊನಾ ಪ್ರಕರಣ ಹೆಚ್ಚಳಕ್ಕೆ ಶೇ.44ರಷ್ಟು ಕಾರಣವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Spread the love

About Laxminews 24x7

Check Also

ಮಹಿಳೆ ಸೃಷ್ಠಿಯ ಮೂಲ: ಡಾ. ಲತಾ

Spread the loveಬಾಗಲಕೋಟೆ : ದೃಡ ಮನಸ್ಸು ಮತ್ತು ಪರಿಶ್ರಮವಿದ್ದರೆ ಏನನ್ನೂ ಬೇಕಾದರೂ ಸಾದಿಸಬಹುದು. ಛಲ ಇಟ್ಟಕೊಂಡರೆ ಎಲ್ಲವೂ ಸಾಧ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ