ಲಾಡ್ಜ್ ಒಂದರಲ್ಲಿ ವ್ಯಕ್ತಿಯೊಬ್ಬ ಕುತ್ತಿಗೆಗೆ ಬೇಡ ಶೀಟ್ ಕಟ್ಟಿಕೊಂಡು ನೇಣಿಗೆ ಶರಣಾದ ಘಟನೆ ಚನ್ನಮ್ಮಾ ವೃತ್ತದ ಹತ್ತಿರ ಇರುವ ಸಂಗಮ ಲಾಡ್ಜ್ ನಲ್ಲಿ ನಡೆದಿದೆ.
ಮೃತ ಯುವಕನನ್ನು ಕಲಘಟಗಿ ತಾಲುಕಿನ ಕಂಪ್ಲಿಕೊಪ್ಪ ಗ್ರಾಮದ ನಿವಾಸಿ ಸಂತೋಷ ಯಲ್ಲಪ್ಪ ಹರಿಜನ ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಡ್ರೈವರ್ ಆಗಿದ್ದು ಡಿಸೆಂಬರ್ 19 ರಂದು ಸಂಗಮ ಲಾಡ್ಜನಲ್ಲಿ 302 ಕೊಠಡಿ ಬುಕ್ಕ ಮಾಡಿದ್ದು ತಿಳಿದು ಬಂದಿದೆ. ಇನ್ನು ಇತನ ಮೇಲೆ ನವನಗರ ಪೊಲೀಸ್ ಠಾಣೆಯಲ್ಲಿ ಒಂದು ಕೇಸ್ ಇದೆ.
ಕೆಲವು ತಿಂಗಳ ಹಿಂದೆ ಇತ ಲವ್ ಪೆಲ್ಯೂರ ಆಗಿತ್ತು ಎನ್ನಲಾಗಿದೆ. ಆದ್ರೆ ಇತ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು ತನಿಖೆಯಿಂದ ತಿಳಿದು ಬರಬೇಕಿದ್ದು , ನಾಲ್ಕು ದಿನದ ಹಿಂದೆಯೆ ಈತ ಕೊಠಡಿಯಲ್ಲಿ ನೇಣಿಗೆ ಶರಣಾಗಿರುವ ಅನುಮಾನಗಳು ವ್ಯಕ್ತವಾಗಿದೆ.
ನಾಲ್ಕು ದಿನದ ನಂತರ ಕೊಠಡಿಯಿಂದ ಕೆಟ್ಟ ವಾಸನೆ ಬರತ್ತಿದ್ದಾಗ ಅಲ್ಲಿನ ಸಿಬ್ಬಂದಿಗೆ ಸಂಶಯ ಬಂದು ಹುಬ್ಬಳ್ಳಿಯ ಉಪನಗರ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಬಂದು ಬಾಗಿಲು ತೆರೆದಿ ನೋಡಿದಾಗ ಸಂತೋಷ ನೇಣಿಗೆ ಶರಣಾದ ಬಗ್ಗೆ ತಿಳಿದಿದ್ದು, ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.