ಬೈಲಹೊಂಗಲ: ತಾಲ್ಲೂಕಿನ ಆನಿಗೋಳ ಗ್ರಾಮದಲ್ಲಿ ಭಾನುವಾರ ರಾತ್ರಿ ಮದ್ಯ ಕುಡಿದ ಮತ್ತಿನಲ್ಲಿ ಯುವಕನೊಬ್ಬ ವ್ಯಕ್ತಿಯನ್ನು ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.
ಮಂಜುನಾಥ ರುದ್ರಪ್ಪ ಸುಣಗಾರ (45) ಕೊಲೆಯಾದವರು. ಅಜಯ ಗುರುಸಯ್ಯ ಹಿರೇಮಠ (26) ಆರೋಪಿ.
ಇಬ್ಬರೂ ಮದ್ಯ ಕುಡಿಯಲು ಕುಳಿತಿದ್ದರು. ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಡಿದರು. ಈ ವೇಳೆ ಹತ್ತಿರದಲ್ಲಿದ್ದ ದೊಡ್ಡ ಕಲ್ಲು ಎತ್ತಿಕೊಂಡ ಅಜಯ ಮಂಜುನಾಥ ಅವರ ತಲೆ ಮೇಲೆ ಎಸೆದು, ಅಲ್ಲಿಂದ ತಲೆಮರೆಸಿಕೊಂಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಂಜುನಾಥ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆ ಮರೆಸಿಕೊಂಡ ಆರೋಪಿ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
Laxmi News 24×7