Breaking News

ಕಳಸಾ-ಭಂಡೂರಿ ಯೋಜನೆಯಿಂದ ಖಾನಾಪುರ, ಮಲಪ್ರಭಾ ದಡದ ಗ್ರಾಮಗಳಿಗೆ ಪ್ರವಾಹದ ಭೀತಿ

Spread the love

ಣಜಿ: ಕಳಸಾ-ಭಂಡೂರಿ ನಾಲೆಯಿಂದ ನೀರು ಹರಿಸುವ ಕರ್ನಾಟಕದ ಪರಿಷ್ಕೃತ ಯೋಜನೆಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದೆ. ಇದಕ್ಕೆ ಅಡ್ಡಿತರುವ ನಿಟ್ಟಿನಲ್ಲಿ ಗೋವಾ ಸರ್ಕಾರ ಮತ್ತೆ ತನ್ನ ಪ್ರಯತ್ನ ಆರಂಭಿಸಲು ಮುಂದಾಗಿದೆ. ಇಷ್ಟೇ ಅಲ್ಲದೆಯೇ ಗೋವಾದಲ್ಲಿ ಪರಿಸರ ಹೋರಾಟಗಾರರೂ ಕೂಡ ತಮ್ಮ ಹೋರಾಟ ಆರಂಭಿಸುವ ಮೂಲಕ ಕರ್ನಾಟಕದ ಈ ಜನ ಯೋಜನೆಗೆ ಅಡ್ಡಗಾಲು ಹಾಕಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದೆ.

 

ಪರಿಸರ ಹೋರಾಟಗಾರ ರಾಜೇಂದ್ರ ಕೇರಕರ್ ಆಕ್ರೋಶ:
ನೈಸರ್ಗಿಕ ಸಂಪತ್ತನ್ನು ಒತ್ತುವರಿ ಮಾಡಿಕೊಂಡು ನೈಸರ್ಗಿಕ ಸರಪಳಿ ಒಡೆಯುವ ಕೆಲಸ ಕರ್ನಾಟಕದಿಂದ ಆರಂಭವಾಗುತ್ತಿದೆ. ಕಳಸಾ-ಭಂಡೂರಿ ನೀರನ್ನು ಮಲಪ್ರಭಾಗೆ ಹರಿಸಿದರೆ ಖಾನಾಪುರ ಪಟ್ಟಣ ಸೇರಿ ಮಲಪ್ರಭಾ ದಡದ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಲಿದೆ. ಸಮಯಕ್ಕೆ ಸರಿಯಾಗಿ ಈ ಯೋಜನೆ ವಿರುದ್ಧ ಧ್ವನಿ ಎತ್ತುವ ಅಗತ್ಯವಿದೆ ಎಂದು ಗೋವಾದ ಪರಿಸರವಾದಿ ರಾಜೇಂದ್ರ ಕೇರ್ಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಕಾರ್ಯಕ್ರಮವೊಂದರಲ್ಲಿ ಉಪಸ್ಥಿತರಿದ್ದ ಅವರು ಸ್ಥಳೀಯ ಸುದ್ದೀವಾಹಿನಿಯೊಂದಿಗೆ ಮಾತನಾಡಿ- 2002 ರಲ್ಲಿ ಕರ್ನಾಟಕ ಸರ್ಕಾರವು ಮಹದಾಯಿ ನದಿಯ ಉಪನದಿಗಳಾದ ಕಳಸಾ, ಭಂಡೂರಿ ಕಾಲುವೆಗಳಿಂದ ಮಲಪ್ರಭಾ ನದಿ ಜಲಾನಯನ ಪ್ರದೇಶಕ್ಕೆ ನೀರನ್ನು ತಿರುಗಿಸಿ ಹುಬ್ಬಳ್ಳಿ ಧಾರವಾಡಕ್ಕೆ ಕೊಂಡೊಯ್ಯಲು ಯೋಜಿಸಿತ್ತು. ಆ ಬಳಿಕ ಗೋವಾ ಸರ್ಕಾರ ಕೇಂದ್ರ ಸರ್ಕಾರದಿಂದ ಮಧ್ಯಸ್ಥಿಕೆ ರಚನೆಗೆ ಒತ್ತಾಯಿಸಿತ್ತು.

2018 ರಲ್ಲಿ, ಮಹದಾಯಿ ಜಲ ಮಧ್ಯಸ್ಥಿಕೆ ಕರ್ನಾಟಕಕ್ಕೆ 3.9 ಟಿಎಂಸಿ ನೀರನ್ನು ಬಳಸಲು ಅವಕಾಶ ಮಾಡಿಕೊಟ್ಟಿತು. ಇದೆಲ್ಲ ನಡೆಯುತ್ತಿರುವಾಗ ಕರ್ನಾಟಕ ಸರಕಾರ ಕಣಕುಂಬಿಯ ಮೌಳಿ ದೇವಸ್ಥಾನದ ಎದುರಿನ ನೀರಿನ ತೊಟ್ಟಿಯನ್ನು ಧ್ವಂಸಗೊಳಿಸಿ ಗೋಡೆ ಕಟ್ಟುವುದು, ಕಾಲುವೆಗಳನ್ನು ನಿರ್ಮಿಸುವುದು ಮುಂತಾದ ಕುತಂತ್ರಗಳನ್ನು ಮುಂದುವರೆಸಿತು. ಇದರಿಂದ ಆ ಪ್ರದೇಶದಲ್ಲಿ ನೈಸರ್ಗಿಕ ಜಲಮೂಲ ನಾಶವಾಗಿದೆ ಎಂದು ಪರಿಸರ ಹೋರಾಟಗಾರ ರಾಜೇಂದ್ರ ಕೇರಕರ್ ಆರೋಪಿಸಿದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ