Breaking News

ಹೊಸ ವರ್ಷ ಸ್ವಾಗತಕ್ಕೆ ಹಾರಿಸಿದ ಗುಂಡು: ಇಬ್ಬರ ಸಾವು

Spread the love

ಶಿವಮೊಗ್ಗ: ಡಬಲ್‌ ಬ್ಯಾರಲ್‌ ಗನ್‌ ಮೂಲಕ ಗುಂಡು ಹಾರಿಸಿ ಹೊಸ ವರ್ಷವನ್ನು ಸ್ವಾಗತಿಸುವ ಧಾವಂತಕ್ಕೆ ನಗರದಲ್ಲಿ ಎರಡು ಜೀವಗಳು ಬಲಿಯಾಗಿವೆ.

ಇಲ್ಲಿನ ವಿದ್ಯಾನಗರದ ನಿವಾಸಿ ಮಂಜುನಾಥ ಓಲೇಕಾರ, ತಮ್ಮ ಮನೆಯ ಮಹಡಿಯ ಮೇಲೆ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಶನಿವಾರ ರಾತ್ರಿ ಗನ್‌ಗೆ ಗುಂಡು ತುಂಬುವಾಗ ಆಕಸ್ಮಿಕವಾಗಿ ಸಿಡಿದ ಅದು ಎಚ್‌.ಯು.

ವಿನಯ್ (34) ಅವರಿಗೆ ತಗುಲಿ ತೀವ್ರವಾಗಿ ಗಾಯಗೊಂಡರು. ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಘಟನೆಯಿಂದ ತೀವ್ರವಾಗಿ ಘಾಸಿಗೊಳಗಾದ ಮಂಜುನಾಥ ಓಲೇಕಾರ (67) ನಂತರ ಹೃದಯಾಘಾತದಿಂದ ಮೃತಪಟ್ಟರು. ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳು ವಿನಯ್‌ ಭಾನುವಾರ ಬೆಳಿಗ್ಗೆ ಸಾವನ್ನಪ್ಪಿದರು.

ಗುಂಡೇಟಿಗೆ ಬಲಿಯಾದ ವಿನಯ್‌ ಹೊಸನಗರದ ನಿವಾಸಿಯಾಗಿದ್ದು, ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿ
ದ್ದರು. ಮಂಜುನಾಥ ಓಲೇಕಾರ ಅವರಿಗೆ ತೋಟ ಇದ್ದು, ಗನ್ ಪರವಾನಗಿ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ