ಧಾರವಾಡ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಗಳಿಸಿದ್ದು ಸಾರ್ವಜನಿಕರ ಹಣ. ಅವರ ಮೇಲೆ ಎಫ್‍ಐಆರ್ ದಾಖಲಿಸಬೇಕು. ಅವರ ಮನೆ ಮೇಲೆ ಸಿಬಿಐ ದಾಳಿ ಮಾಡಿದ್ದು ಸ್ವಾಗತಾರ್ಹ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ ಹೇಳಿದರು.ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಮೇಲೆ ಎಫ್‍ಐಆರ್ ದಾಖಲಿಸಿ ಬೇರೆ ಯಾರೂ ಇಂತಹ ಕೆಲಸ ಮಾಡದಂತೆ ಮಾಡಬೇಕು.
ಅವರ ಅಕ್ರಮ ಸಂಪಾದನೆ ಮೇಲೆ ಸಿಬಿಯ ದಾಳಿ ಮಾಡಿರುವುದು ಬಹಳ ಮಹತ್ವದ ವಿಷಯ. ಅವರ ಪರವಾಗಿ ಈ ಕಾಂಗ್ರೆಸ್ಸಿನವರು ಪ್ರತಿಭಟನೆ ಮಾಡುವುದನ್ನು ಬಂದ್ ಮಾಡಬೇಕು ಎಂದರು.
ಸಚಿವ ಶ್ರೀರಾಮುಲು 100 ಕೋಟಿ ರೂಪಾಯಿ ಮೌಲ್ಯದ ಮನೆ ಕಟ್ಟಲು ಹಣ ಎಲ್ಲಿಂದ ಬಂತು? ನಾವು ಈಗಾಗಲೇ ಈ ರೀತಿ ಅಕ್ರಮ ಸಂಪಾದನೆ ಮಾಡಿದವರ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದೆವೆ ಎಂದರು.