Breaking News

ಭಾರತದ ವಾಯುಪಡೆ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು

Spread the love

ನವದೆಹಲಿ,ಅ.7- ವಿಶ್ವದ ಅತ್ಯಂತ ಪ್ರಬಲ ವಾಯುಪಡೆಗಳಲ್ಲಿ ಒಂದಾದ ಇಂಡಿಯನ್ ಏರ್ ಫೋರ್ಸ್ (ಐಎಎಫ್)ನ 88ನೇ ವಾರ್ಷಿಕ ದಿನಾಚರಣೆ ಪ್ರಯುಕ್ತ ನಾಳೆ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ. ಒಂದೆಡೆ ಚೀನಾ, ಇನ್ನೊಂದೆಡೆ ಪಾಕಿಸ್ತಾನದಿಂದ ಗಡಿಭಾಗಗಳಲ್ಲಿ ಆಗಾಗ ಉಪಟಳ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಐಎಎಫ್ ಡೇ ಸಮಾರಂಭದಲ್ಲಿ ಭಾರತೀಯ ವಾಯುಪಡೆಯ ಅಗಾಧ ಶಕ್ತಿ ಅನಾವರಣಗೊಳ್ಳಲಿದೆ.

ಐಎಎಫ್‍ನ ಜಾಗ್ವಾರ್, ಮಿಗಿ 29, ಮಿಗಿ 21, ಸುಕೋಯ್ ಯುದ್ಧ ವಿಮಾನಗಳು ನಾಳಿನ ವಾಯುಪಡೆ ದಿನಾಚರಣೆ ಸಂದರ್ಭದಲ್ಲಿ ಬಾನಾಂಗಳದಲ್ಲಿ ರೋಚಕ ಕಸರತ್ತು ಪ್ರದರ್ಶಿಸಲಿದೆ.

ಭಾರತೀಯ ವಾಯಪಡೆಗೆ ಇತ್ತೀಚೆಗಷ್ಟೇ ಸೇರ್ಪಡೆಯಾಗಿರುವ ಅತ್ಯಾಧುನಿಕ ರಫೇಲ್ ಫೈಟರ್‍ಜೆಟ್‍ಗಳು ಸಹ ಐಎಎಫ್ ಡೇ ಸಂದರ್ಭದಲ್ಲಿ ಆಗಸದಲ್ಲಿ ಭೋರ್ಗರೆಯಲಿದೆ. ಅಲ್ಲದೆ ಅಪಾಚೆ, ಚೇತಕ್, ಚಿನುಕ್, ಅರ್‍ಕ್ಯುಲಿಸ್ ಹೆಲಿಕಾಪ್ಟರ್‍ಗಳು ಸಹ ಹಾರಾಟ ನಡೆಸಲಿವೆ.

ಈಗಾಗಲೇ ಗಜಿಯಾಬಾದ್‍ನ ಹಿಂಡೋನ್ ವಾಯುನೆಲೆಯಲ್ಲಿ ಈ ಫೈಟರ್‍ಜೆಟ್‍ಗಳು ಮತ್ತು ಹೆಲಿಕಾಪ್ಟರ್‍ಗಳು ಪೂರ್ಣ ಪ್ರಮಾಣದ ತಾಲೀಮು ನಡೆಸಿ ನಾಳೆ ರೋಚಕ ಪ್ರದರ್ಶನ ನೀಡಲು ಸಜ್ಜಾಗಿವೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತೀಯ ಮೂರು ಶಸ್ತ್ರಸ್ತ್ರ ಪಡೆಗಳ ಮಹಾದಂಡನಾಯಕರಾದ ಜನರಲ್ ಬಿಪಿನ್ ರಾವತ್, ರಕ್ಷಣಾ ಇಲಾಖೆಯ ಉನ್ನತ ಅಕಾರಿಗಳು, ಭಾರತೀಯ ವಾಯುಪಡೆಯ ಏರ್‍ಚೀಫ್ ಮಾರ್ಷಲ್, ರಾಕೇಶ್‍ಕುಮಾರ್ ಬದೌರಿಯ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ವಿಶ್ವದ ಅತ್ಯಂತ ಪ್ರಬಲ ವಾಯುಪಡೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಐಎಎಫ್ ವಾಯುಪಡೆ ದಿನಾಚರಣೆ ಸಂದರ್ಭದಲ್ಲಿ ತನ್ನ ಶಕ್ತಿ ಸಾಮಥ್ರ್ಯವನ್ನು ಪ್ರದರ್ಶಿಸಿ ಚೀನಾ ಮತ್ತು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಲು ಸಜ್ಜಾಗಿದೆ.


Spread the love

About Laxminews 24x7

Check Also

ಬೆಳಗಾವಿ ಜಿಲ್ಲೆ ವಿಭಜನೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯ

Spread the loveಬೆಳಗಾವಿ: 2025ರ ಡಿಸೆಂಬರ್‌ 31ರೊಳಗೆ ಕ್ರಮವಹಿಸಿ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡದೇ ಹೋದರೆ ಈ ಸರ್ಕಾರದ ಅವಧಿಯಲ್ಲಿ ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ