Breaking News
Home / ರಾಜಕೀಯ / 6 ಖಾಸಗಿ ವಿವಿ ಸ್ಥಾಪನೆ ಯತ್ನಕ್ಕೆ ಹಿನ್ನಡೆ

6 ಖಾಸಗಿ ವಿವಿ ಸ್ಥಾಪನೆ ಯತ್ನಕ್ಕೆ ಹಿನ್ನಡೆ

Spread the love

ಸುವರ್ಣ ವಿಧಾನಸೌಧ: ನೂತನವಾಗಿ 6 ಖಾಸಗಿ ವಿಶ್ವವಿದ್ಯಾಲಯ ರಚನೆಗೆ ತರಾತುರಿಯಲ್ಲಿ ಹೊರಟಿದ್ದ ಸರಕಾರಕ್ಕೆ ಕಲಾಪದಲ್ಲಿ ಸ್ವಪಕ್ಷೀಯ ಶಾಸಕರಿಂದಲೇ ಬಲವಾದ ವಿರೋಧ ವ್ಯಕ್ತವಾಯಿತು. ಖಾಸಗಿ ವಿಶ್ವವಿದ್ಯಾಲಯಗಳ ಮೇಲೆ ಸರ್ಕಾರಕ್ಕೆ ಯಾವುದೇ ನಿಯಂತ್ರಣ ಇರುವುದಿಲ್ಲ, ಹಾಗಿರುವಾಗ ವಿಧೇಯಕದಲ್ಲಿರುವ ಅಂಶಗಳನ್ನು ಸರಿಯಾಗಿ ವಿಶ್ಲೇಷಣೆ ಮಾಡದೆ, ಆ ಬಗ್ಗೆ ಚರ್ಚೆಯನ್ನೂ ಮಾಡದೆ ಅನುಮೋದಿಸುವುದು ಸದನದ ಗೌರವಕ್ಕೆ ಅಪಚಾರವಾದಂತೆ ಎಂದು ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಧೇಯಕಗಳನ್ನು ಹಿಂಪಡೆಯಬೇಕಾಗಿ ಬಂತು.

 

ವಿಧಾನಸಭೆಯಲ್ಲಿ ಗುರುವಾರ ಮಧ್ಯಾಹ್ನ ಸದಸ್ಯರ ಹಾಜರಾತಿ ಕಡಿಮೆ ಇರುವಾಗಲೇ ಕಾರ್ಯಕಲಾಪದ ಪಟ್ಟಿಯಂತೆಯೇ 6 ಖಾಸಗಿ ವಿಶ್ವವಿದ್ಯಾಲಯಗಳ ವಿಧೇಯಕವನ್ನು ಉನ್ನತ ಶಿಕ್ಷಣ ಸಚಿವ ಡಾ|ಸಿ.ಎನ್‌.ಅಶ್ವತ್ಥನಾರಾಯಣ ಅವರು ಮಂಡಿಸಿದರು. ವಿಧಾನ ಪರಿಷತ್ತಿನಲ್ಲೂ ಇದಕ್ಕೆ ಅನುಮೋದನೆ ಸಿಗುವ ಭರವಸೆಯನ್ನು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಸಚಿವರು ಮನದಟ್ಟು ಮಾಡಿದ್ದರು.

ಜಿ.ಎಂ.ವಿಶ್ವವಿದ್ಯಾಲಯ, ಕಿಷ್ಕಿಂಧ ವಿಶ್ವವಿದ್ಯಾಲಯ, ಆಚಾರ್ಯ ವಿಶ್ವವಿದ್ಯಾಲಯ, ಸಪ್ತಗಿರಿ ಎನ್‌ಪಿಎಸ್‌ ವಿಶ್ವವಿದ್ಯಾಲಯ, ರಾಜ್ಯ ಒಕ್ಕಲಿಗರ ಸಂಘ ವಿಶ್ವವಿದ್ಯಾಲಯ ಹಾಗೂ ಟಿ.ಜಾನ್‌ ವಿಶ್ವವಿದ್ಯಾಲಯಗಳ ವಿಧೇಯಕಗಳನ್ನು ಸದನದಲ್ಲಿ ಮಂಡಿಸಲಾಯಿತು. ಈ ವೇಳೆ ಮಾತನಾಡಿದ ಸಚಿವರು, ಸರಕಾರಕ್ಕೆ ವಿಶ್ವವಿದ್ಯಾಲಯಗಳ ಮೇಲೆ ಯಾವುದೇ ಹಣಕಾಸಿನ ಬಾಧ್ಯತೆಗಳು ಇರುವುದಿಲ್ಲ, ಶೇ.40ರಷ್ಟು ಸೀಟುಗಳನ್ನು ಸರಕಾರಕ್ಕೆ ನೀಡುತ್ತಾರೆ ಹಾಗೂ ಉಳಿದ ಶೇ.60 ಸೀಟುಗಳನ್ನು ಶುಲ್ಕ ನಿಯಂತ್ರಣ ಸಮಿತಿ ಮೂಲಕ ತುಂಬುತ್ತಾರೆ, ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಮೂಲಕ ಕಾಲೇಜುಗಳಿಗೆ ಸ್ವಾಯತ್ತತೆ ನೀಡಬಹುದು, ಆ ಮೂಲಕ ಹೊಸ ಹೊಸ ಕೋರ್ಸ್‌ಪ್ರಾರಂಭಿಸುವುದು ಸಾಧ್ಯವಾಗಲಿದೆ ಎಂದು ಹೇಳಿದರು.

ವಿಧೇಯಕದ ಮಂಜೂರಾತಿ ಪಡೆಯುವ ಹೊತ್ತಿನಲ್ಲಿ ಹಲವು ಸದಸ್ಯರು ಆಗಮಿಸಿದ್ದರು. ಆರಂಭದಲ್ಲಿ ಸ್ಪೀಕರ್‌ ಅವರೇ ಸಾಕಷ್ಟು ಎಂಜಿನಿಯರಿಂಗ್‌ ಕಾಲೇಜುಗಳು ಈಗಾಗಲೇ ಇರುವಾಗ ಹೊಸ ಹೊಸ ವಿವಿಗಳು ಅದೇ ಕೋರ್ಸ್‌ ನೀಡುವುದರಲ್ಲಿ ಇನ್ನಷ್ಟು ಪದವೀಧರರನ್ನು ಸೃಷ್ಟಿಸುವಲ್ಲಿ ಅರ್ಥವಿದೆಯಾ ಎಂದರು.


Spread the love

About Laxminews 24x7

Check Also

170 ಲಕ್ಷ ಕೋಟಿ ಮೀರಿದ ಕೇಂದ್ರದ ಸಾಲ

Spread the love ಕೇಂದ್ರ ಸರ್ಕಾರದ ಒಟ್ಟು ಸಾಲವು 2024ರ ಮಾರ್ಚ್‌ ಅಂತ್ಯದ ವೇಳೆಗೆ ₹171.78 ಲಕ್ಷ ಕೋಟಿಗೆ ಏರಿಕೆಯಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ