Breaking News

ವಿಧಾನಪರಿಷತ್ ನಲ್ಲಿ `ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ ವಿಧೇಯಕ’ ಅಂಗೀಕಾರ

Spread the love

ಬೆಳಗಾವಿ : ವಿಧಾನಪರಿಷತ್ ನಲ್ಲಿ ಸುದೀರ್ಘ ಚರ್ಚೆ ಬಳಿಕ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ವಿಧೇಯಕ-2022 ಕ್ಕೆ ಅಂಗೀಕಾರ ದೊರೆಯಿತು.

 

ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಈ ಕುರಿತು ಮಾತನಾಡಿದ್ದು, 2005 ಕ್ಕಿಂತ ಪೂರ್ವದಲ್ಲಿ ಕೃಷಿ ಮಾಡಿಕೊಂಡು ಬಂದಿರುವವರಿಗೆ 25 ಎಕರೆ ಭೂಮಿಯನ್ನು 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡುವ ಪ್ರಸ್ತಾಪ ಇದರಲ್ಲಿದೆ. ಆದರೆ ಇದ್ದವರಿಗೆ ಕೊಡುವ ಬದಲು ಇಲ್ಲದ ರೈತರಿಗೆ ಭೂಮಿ ನೀಡಿದರೆ ಅವರ ಜೀವನ ಹಸನಾಗುತ್ತದೆ. ತರಾತುರಿಯಲ್ಲಿ ಬಿಲ್ ನ್ನು ಮಂಡಿಸಿ ಪಾಸ್ ಮಾಡಿಸಿಕೊಳ್ಳುವ ಬದಲು ವಿಸ್ತೃತವಾಗಿ ಚರ್ಚೆ ಮಾಡಲು ಬಿಡಿ ಎಂದು ಹೇಳಿದ್ದಾರೆ.

ಇನ್ನು ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಭೂ ಪರಿವರ್ತನೆಯನ್ನು ಸರಳೀಕರಣಗೊಳಿಸುವ ದೃಷ್ಟಿಯಿಂದ ಈ ತಿದ್ದುಪಡಿ ಜಾರಿಗೆ ತರಲಾಗಿದೆ. ಅರ್ಜಿ ಸ್ವೀಕೃತಿಯ 15 ದಿನಗಳಲ್ಲಿ ಭೂಪರಿವರ್ತನಾ ಆದೇಶ ನೀಡುವ ಅವಕಾಶವಿದೆ. 7 ದಿನ ಕಳೆದರೆ ನೇರವಾಗಿಯೇ ಭೂಪರಿವರ್ತನೆ ಆದೇಶ ಕೈ ಸೇರುವ ನಿಟ್ಟಿನಲ್ಲಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ


Spread the love

About Laxminews 24x7

Check Also

ಹುಬ್ಬಳ್ಳಿ | ಅವಳಿ ನಗರದ ಹಳೇ ಕಸಕ್ಕೆ ಮುಕ್ತಿ ಶೀಘ್ರ; ಗುಜರಾತ್ ಕಂಪನಿಗೆ ಟೆಂಡರ್‌

Spread the love ಹುಬ್ಬಳ್ಳಿ: ಸಾರ್ವಜನಿಕರ ನಿದ್ದೆಗೆಡಿಸಿದ್ದ ಇಲ್ಲಿನ ಕಾರವಾರ ರಸ್ತೆಯ ಕೆಂಪಗೆರೆ ಮತ್ತು ಧಾರವಾಡದ ಹೊಸ ಯಲ್ಲಾಪುರದ ಘನತ್ಯಾಜ್ಯ ವಿಲೇವಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Sahifa Theme License is not validated, Go to the theme options page to validate the license, You need a single license for each domain name.