Breaking News

ಮೂವರು ವಿವಾಹಿತ ಶಿಕ್ಷಕರ ನಡುವಿನ ಪ್ರೀತಿಗೆ ವಿದ್ಯಾರ್ಥಿ ಬಲಿ;

Spread the love

ದಗ: ಮೂವರು ವಿವಾಹಿತ ಶಿಕ್ಷರ ಪ್ರೀತಿಗೆ ವಿದ್ಯಾರ್ಥಿ ಬಲಿ ಆಗಿದ್ದಾನೆ. ಅದರಲ್ಲೂ ಇಬ್ಬಿಬ್ಬರೊಂದಿಗಿದ್ದ ಅಮ್ಮನ ಸಲುಗೆ ಮಗನಿಗೇ ಮುಳುವಾಗಿದೆ. ಅಮ್ಮನೊಂದಿಗೆ ಸಲುಗೆಯಿಂದಿದ್ದ ಇಬ್ಬರು ಶಿಕ್ಷಕರ ಪೈಕಿ ಒಬ್ಬ ಆಕೆಯ ಮಗನನ್ನು ಭೀಕರವಾಗಿ ಕೊಲೆ ಮಾಡಿ ಕ್ರೌರ್ಯ ತೋರಿದ್ದಾನೆ.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ಈ ಘಟನೆ ನಡೆದಿತ್ತು. ಸಹಶಿಕ್ಷಕಿ ಗೀತಾ ಎಂಬಾಕೆಯ ಪುತ್ರ ಭರತ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಭರತ್​​ಗೆ ಸಲಿಕೆಯಿಂದ ಹೊಡೆದು, ಶಾಲೆಯ ಒಂದನೇ ಮಹಡಿಯಿಂದ ಕೆಳಗೆ ಎಸೆದಿದ್ದ. ರಕ್ಷಣೆಗೆ ಧಾವಿಸಿದ್ದ ಗೀತಾ ಹಾಗೂ ಇನ್ನೊಬ್ಬ ಶಿಕ್ಷಕ ಸಂಗನಗೌಡ ಪಾಟೀಲ್ ಮೇಲೂ ಹಲ್ಲೆ ಮಾಡಿದ್ದ.

ಅತಿಥಿ ಶಿಕ್ಷಕಿ ಗೀತಾ, ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಜತೆ ಸಲುಗೆಯಿಂದ ಇದ್ದಳು. ಮಾತ್ರವಲ್ಲ ಇನ್ನೊಬ್ಬ ಅತಿಥಿ ಶಿಕ್ಷಕ ಸಂಗನಗೌಡ ಪಾಟೀಲ್ ಜತೆಗೂ ಈಕೆ ಸಲುಗೆಯಿಂದಿದ್ದಳು. ಮುತ್ತಪ್ಪನ ಜತೆ ಗೀತಾ ವಾಟ್ಸ್​ಆಯಪ್ ಚಾಟ್ ಮಾಡುತ್ತಿದ್ದಳು. ಆದರೆ ಈಕೆ ಸಂಗನಗೌಡ ಪಾಟೀಲ್ ಜತೆ ಸಲುಗೆಯಿಂದ ಇರುವುದು ಮುತ್ತಪ್ಪನಿಗೆ ಇಷ್ಟವಾಗುತ್ತಿರಲಿಲ್ಲ. ಅದಾಗ್ಯೂ ಇತ್ತಿಚೆಗೆ ಶೈಕ್ಷಣಿಕ ಪ್ರವಾಸಕ್ಕೆ ಹೋದಾಗ ಸಂಗನಗೌಡ ಹಾಗೂ ಗೀತಾ ಸಲುಗೆಯನ್ನು ಗಮನಿಸಿದ್ದ ಮುತ್ತಪ್ಪ, ಅವರಿಬ್ಬರನ್ನೂ ಕೊಲೆ ಮಾಡಲು ಸಂಚು ಹೂಡಿದ್ದ. ಇದೇ ಯೋಚನೆಯಲ್ಲಿ ಭರತ್ ಹಾಗೂ ಗೀತಾ ಮೇಲೆ ಹಲ್ಲೆ ಮಾಡಿದ್ದ.

ಈ ಪ್ರಕರಣ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿಕ್ಷಕ ಮುತ್ತಪ್ಪ ಹಡಗಲಿಯನ್ನು ಪೊಲೀಸರ ವಿಶೇಷ ತಂಡ ಸವದತ್ತಿಯಲ್ಲಿ ಬಂಧಿಸಿದೆ. ಬಾಲಕ ಭರತ್ ಸಾವಿಗೀಡಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಗೀತಾ ಪರಿಸ್ಥಿತಿ ಚಿಂತಾಜನಕವಾಗಿದೆ. ಮುತ್ತಪ್ಪ ಹಡಗಲಿ, ಗೀತಾ, ಸಂಗನಗೌಡ ಪಾಟೀಲ್ ಮೂವರೂ ವಿವಾಹಿತರು ಎಂದು ಗದಗ ಎಸ್​ಪಿ ಶಿವಪ್ರಕಾಶ್ ದೇವರಾಜು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ