Breaking News

ದಾಖಲೆ ಬರೆದ ಬ್ಯಾಡಗಿ ಮೆಣಸಿನಕಾಯಿ ದರ: ಕ್ವಿಂಟಾಲ್ ಗೆ 55 ಸಾವಿರಕ್ಕೂ ಅಧಿಕ ಬೆಲೆ

Spread the love

ಹಾವೇರಿ: ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ದರ ದಾಖಲೆ ಬರೆದಿದೆ. ಸೋಮವಾರದ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಡಬ್ಬಿ ತಳಿ ದರ 52,569 ರೂಪಾಯಿ ಹಿಂದಿಕ್ಕಿದ ಕಡ್ಡಿ ಮೆಣಸಿನಕಾಯಿ 55,589 ರೂ.ಗೆ ಮಾರಾಟವಾಗಿ ದಾಖಲೆ ಬರೆದಿದೆ.

 

ಮೆಣಸಿನಕಾಯಿ ಆವಕದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಮೂರು ತಳಿಯ ಮೆಣಸಿನ ಕಾಯಿಗೆ ಉತ್ತಮ ಧಾರಣೆ ದೊರೆತಿದೆ. ಅಂತರರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮಾರುಕಟ್ಟೆಗೆ ಮೆಣಸಿನಕಾಯಿ ಇತ್ತೀಚಿನ ತಿಂಗಳುಗಳಲ್ಲಿ ಆವಕ ಕಡಿಮೆಯಾಗಿತ್ತು. ಸೋಮವಾರ ಮಾರುಕಟ್ಟೆಗೆ 46,447 ಚೀಲ ಮೆಣಸಿನಕಾಯಿ ಮಾರಾಟಕ್ಕೆ ಬಂದಿದ್ದು, ಕಡ್ಡಿ ಮೆಣಸಿನ ಕಾಯಿ 55,589 ರೂ.ಗೆ ಮಾರಾಟವಾಗಿ ದಾಖಲೆ ಬರೆದಿದೆ.


Spread the love

About Laxminews 24x7

Check Also

ರಾಹುಲ್‌ ಸದಸ್ಯತ್ವ ರದ್ದುಗೊಳಿಸಿ – ಬಿಜೆಪಿಯಿಂದ ಪ್ರಸ್ತಾಪ ಸಲ್ಲಿಕೆ

Spread the loveನವದೆಹಲಿ: ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದ  ಸಂಬಂಧವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ವಿಪಕ್ಷ ನಾಯಕ ರಾಹುಲ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ