ಜಾರ್ಖಾಂಡ ರಾಜ್ಯದ ಗಿರಡಿ ಜಿಲ್ಲೆಯಲ್ಲಿರುವ ಜೈನರ ಪರಮೋಚ್ಚ ತೀರ್ಥ ಕ್ಷೇತ್ರ ಶ್ರೀ ಸಮ್ಮೇದಗಿರಿ ಉಳಿಸಿ, ಪ್ರವಾಸಿ ತಾಣವೆಂದು ಘೋಷಣೆ ರದ್ದುಪಡಿಸಿ ಜೈನ ಪವಿತ್ರ ಕ್ಷೇತ್ರವಾಗಿ ಘೋಷಿಸುವಂತೆ ಒತ್ತಾಯಿಸಿ ಡಿ.
21 ರಂದು ದಿಗಂಬರ ಜೈನ ಸಮಾಜದ ವತಿಯಿಂದ ಮೌನ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗುವುದು ಎಂದು ಜೈನ ಮುಖಂಡರಾದ ಮಹೇಂದ್ರ ಸಿಂಘಿ ಹೇಳಿದರು.
ನಗರದಲ್ಲಿಂದು ಮಾದ್ಯಮ ವರದಿಗಾರರೊಂದಿಗೆ ಮಾತನಾಡಿದ ಅವರು, ಪಾರಸನಾಥ ಪರ್ವತ ಶ್ರೀ ಸಮ್ಮೇದಗಿರಿಯನ್ನು ಮತ್ತು ಸುತ್ತಲಿನ ಮಧುಬನ ಪ್ರದೇಶವನ್ನು ಮಾಂಸ-ಮದ್ಯ ಮಾರಾಟ ಮುಕ್ತ ಪವಿತ್ರ ಜೈನ ತೀರ್ಥ ಎಂದು ಘೋಷಿಸಬೇಕು.
ಹಾಗೂ ಬೇಡಿಕೆಗಳಿಗೆ ಆಗ್ರಹಿಸಿ ಹುಬ್ಬಳ್ಳಿಯ ಶಾಂತಿನಾಥ ಸಾಂಸ್ಕೃತಿಕ ಭವನದಿಂದ ಪ್ರತಿಭಟನಾ ಮೌನ ಮೆರವಣಿಗೆ ನಡೆಸಿ ತಹಶಿಲ್ದಾರ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರಮಂತ್ರಾಲಯ, ಜಾರ್ಖಾಂಡ್ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳು, ಪ್ರದೇಶ ಸಂಸದರಿಗೆ ಆಗ್ರಹ ಮಾಡಲಾಗುವುದು ಎಂದರು
Laxmi News 24×7