Breaking News

ಸಭಾಪತಿಗೆ ನನ್ನ ಹೆಸರು ಫೈನಲ್‌: ಬಸವರಾಜ ಹೊರಟ್ಟಿ

Spread the love

ಧಾರವಾಡ: ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಆಡಳಿತರೂಢ ಬಿಜೆಪಿ ಪಕ್ಷದಿಂದ ನನ್ನ ಹೆಸರು ಅಂತಿಮಗೊಂಡಿದೆ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಭಾಪತಿ ಸ್ಥಾನದ ಅಭ್ಯರ್ಥಿಯಾದ ಬಗ್ಗೆ ಬಿಜೆಪಿ ಮುಖಂಡರಾದ ರವಿಕುಮಾರ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.

ಶೀಘ್ರ ಅಧಿಕೃತ ಅಭ್ಯರ್ಥಿಯಾಗಿಯೂ ಪ್ರಕಟಣೆ ಹೊರ ಬೀಳಲಿದೆ.

ಈ ಸಿಹಿ ಸುದ್ದಿ ನೀಡಿದ ರವಿಕುಮಾರ ಅವರಿಗೆ ಧನ್ಯವಾದ ತಿಳಿಸಿದ್ದೇನೆ. ಉತ್ತರ ಕರ್ನಾಟಕದ ನಮ್ಮ ಸಮಸ್ಯೆಗಳಿಗೆ ಪ್ರತಿಫಲ ಬೇಕಷ್ಟೇ. ಹೀಗಾಗಿ ಬೆಳಗಾವಿ ಚಳಿಗಾಲ ಅ ಧಿವೇಶನ ವೇಳೆ ಧರಣಿ ನಡೆಸದಂತೆ ಈ ಹಿಂದೆಯೂ ಅನೇಕ ಸಲ ಮನವಿ ಮಾಡಿದ್ದೇನೆ.

ಹಿಂದೆ ನಾನು ಉತ್ತರ ಕರ್ನಾಟಕದ ಕುರಿತು ಚರ್ಚಿಸಲು ಎರಡು ದಿನ ಮೀಸಲಿಟ್ಟಿದ್ದೆ. ನಮ್ಮದು ಸಮಗ್ರ ಕರ್ನಾಟಕದ ನಿಲುವು. ಆದಾಗ್ಯೂ ಕೂಡ ಉತ್ತರದ ಸಮಸ್ಯೆಗಳಿಗೆ ಸರ್ಕಾರ, ಸದಸ್ಯರು ಸ್ಪಂದಿಸಲಿ. ಭಾರತ ಜಾತ್ಯತೀತ ರಾಷ್ಟ್ರ.

ಮೀಸಲಾತಿಗೆ ಹೋರಾಟ ಮಾಡುವುದು ಅವರ ಹಕ್ಕು. ಪಂಚಮಸಾಲಿ 2ಎ ಮೀಸಲಾತಿಯೂ ಇದಕ್ಕೆ ಹೊರತಾಗಿಲ್ಲ. ಮಾಡುವ ಹೋರಾಟ ಶಾಂತಿಯುತವಾಗಿ ನಡೆಯಬೇಕು ಮತ್ತು ಯಾರಿಗೂ ನೋವಾಗದಂತೆ ಇರಬೇಕು ಎಂದರು.


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ