Breaking News
Home / ಜಿಲ್ಲೆ / ಬೆಳಗಾವಿ / ರೋಹಿತ್‌ ಪವಾರ್‌ ಗೋಪ್ಯ ಸಭೆ

ರೋಹಿತ್‌ ಪವಾರ್‌ ಗೋಪ್ಯ ಸಭೆ

Spread the love

ಬೆಳಗಾವಿ: ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಅವರ ಸಹೋದರ ಸಂಬಂಧಿ, ಮಹಾರಾಷ್ಟ್ರದ ಶಾಸಕ ರೋಹಿತ್‌ ಪವಾರ್‌ ಅವರು ಮಂಗಳವಾರ ಬೆಳಗಾವಿಯ ಎಂಇಎಸ್‌ ಮುಖಂಡರ ಜತೆ ಗೋಪ್ಯ ಸಭೆ ನಡೆಸಿದರು.

‘ಗಡಿ ವಿಚಾರವಾಗಿ ನಡೆದ ಬೆಳವಣಿಗೆಗಳ ಮಾಹಿತಿ ಪಡೆಯಲು, ಮಹಾ ವಿಕಾಸ ಅಘಾಡಿ ನಾಯಕರ ಸೂಚನೆ ಮೇರೆಗೆ ರೋಹಿತ್ ಅವರು ಸೋಮವಾರ ಸಂಜೆ ಬೆಳೆಗಾವಿಗೆ ಬಂದರು.

ಇಲ್ಲಿನ ಮರಾಠಿಗರ ಸ್ಥಿತಿಗತಿಗಳ ಮಾಹಿತಿ ಪಡೆದರು’ ಎಂದು ಎಂಇಎಸ್‌ನ ಮುಖಂಡರು ತಿಳಿಸಿದ್ದಾರೆ.

ಮಂಗಳವಾರ ಸಮೀಪದ ಹಿಂಡಲಗಾ ಗ್ರಾಮದಲ್ಲಿರುವ, ಗಡಿ ಹೋರಾಟದಲ್ಲಿ ಮೃತಪಟ್ಟ 9 ಜನರ ಹುತಾತ್ಮ ಸ್ಮಾರಕ, ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಯಳ್ಳೂರು ಗ್ರಾಮದಲ್ಲಿರುವ ‘ಮಹಾರಾಷ್ಟ್ರ ಪ್ರೌಢಶಾಲೆ’ಗೆ ಭೇಟಿ ನೀಡಿದರು.

‘ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಿದ ಕಾರಣ, ಎನ್‌ಸಿಪಿ ನಾಯಕರು ರೋಹಿತ್‌ ಪವಾರ್‌ ಅವರನ್ನು ಕಳುಹಿ ಸಿದ್ದಾರೆ. ಮಾಧ್ಯಮಗಳ ಮುಂದೆ ಹುಲಿಯಂತೆ ಗರ್ಜಿಸುವ ಮಹಾರಾಷ್ಟ್ರದ ನಾಯಕರು, ಈಗ ಕಳ್ಳ ನರಿಯಂತೆ ಬಂದು ಹೋಗುತ್ತಿದ್ದಾರೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಕಿಡಿ ಕಾರಿದ್ದಾರೆ.


Spread the love

About Laxminews 24x7

Check Also

ಖಾನಾಪುರ: ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು

Spread the love ಖಾನಾಪುರ: ಪಟ್ಟಣದ ಹೊರವಲಯದ ಬೆಳಗಾವಿ ರಸ್ತೆಯ ಮರೆಮ್ಮ ದೇವಾಲಯದ ಬಳಿ ಶುಕ್ರವಾರ ರಾತ್ರಿ ಲಾರಿ ಹಿಂದಿನ ಚಕ್ರಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ