Breaking News

ಗಡಿ ವಿವಾದದ ಕಿಚ್ಚು ಹೊತ್ತಿರುವಾಗಲೇ ಮಂಗಳವಾರ ಬೆಳಗಾವಿ ನಗರಕ್ಕೆ ಆಗಮಿಸಿದ ಮಹಾರಾಷ್ಟ್ರದ ಎನ್ ಸಿಪಿ‌ ಶಾಸಕ ರೋಹಿತ್ ಪವಾರ್

Spread the love

ಗಡಿ ವಿವಾದದ ಕಿಚ್ಚು ಹೊತ್ತಿರುವಾಗಲೇ ಮಂಗಳವಾರ ಬೆಳಗಾವಿ ನಗರಕ್ಕೆ ಆಗಮಿಸಿದ ಮಹಾರಾಷ್ಟ್ರದ ಎನ್ ಸಿಪಿ‌ ಶಾಸಕ ರೋಹಿತ್ ಪವಾರ್ ಜಿಲ್ಲಾಡಳಿತಕ್ಕೆ ಟಾಂಗ್ ನೀಡಿದ್ದಾರೆ.

ಮಂಗಳವಾರ ನಗರದ ವಿವಿಧ ಪ್ರದೇಶಕ್ಕೆ‌ ತೆರಳಿ ಮರಾಠಿ ಸಮಾಜದ ಸಮಸ್ಯೆ ಆಲಿಸಿದ ಎನ್ ಸಿಪಿ ಶಾಸಕ ರೋಹಿತ್ ಎಂಇಎಸ್ ಮುಖಂಡ ದೀಪಕ ದಳವಿ ಮನೆಗೆ ತೆರಳಿ ಮಾತುಕತೆ ನಡೆಸಿದರು. ಇದಕ್ಕೂ‌ ಮೊದಲು ಹುತಾತ್ಮ ಚೌಕ ಬಳಿ ಬಂದು ಎಂಇಎಸ್ ನಾಯಕರನ್ನು ಭೇಟಿಯಾದರು.

ಬಳಿಕ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ನನಗೂ ಹಾಗೂ ಬೆಳಗಾವಿಗೂ ಅವಿನಾಭಾವ ಸಂಬಂಧ ಇದೆ. ನಾನು ಮಹಾರಾಷ್ಟ್ರದಿಂದ ಯಾವುದೇ ಅಡ್ಡ ದಾರಿಯಿಂದ ಬಂದಿಲ್ಲ‌. ನೇರವಾಗಿ ಬಂದಿದ್ದೇನೆ. ಬೆಳಗಾವಿಲ್ಲಿರುವ ಮರಾಠಿ ಭಾಷಿಕರ ಸಮಸ್ಯೆಯನ್ನು ಬಗೆ ಹರಿಸಲು ಮಹಾರಾಷ್ಟ್ರ ಸದನದಲ್ಲಿ ಚರ್ಚೆ ನಡೆಸುವೆ ಎಂದರು.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ