Breaking News

ಅಪ್ಪನ ಹತ್ಯೆಗೈದು 30 ತುಂಡು ತುಂಡಾಗಿ ಕತ್ತರಿಸಿ ಮೃತದೇಹ ಎಸೆದ ಮಗ.. ಬೆಚ್ಚಿಬಿದ್ದ ಬಾಗಲಕೋಟೆ

Spread the love

ಬಾಗಲಕೋಟೆ: ದೆಹಲಿಯಲ್ಲಿ ಇತ್ತೀಚೆಗೆ ನಡೆದ ಶ್ರದ್ಧಾ ಹತ್ಯೆ ಮಾದರಿಯಲ್ಲೇ ಪಾಪಿ ಮಗನೊಬ್ಬ ತಂದೆಯನ್ನ ಹತ್ಯೆ ಮಾಡಿ 30ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ ಕೊಳವೆ ಬಾವಿಗೆ ಬಿಸಾಕಿರುವ ಭಯಾನಕ ಘಟನೆ ಮುಧೋಳ ನಗರದಲ್ಲಿ ನಡೆದಿದೆ.

ಮುಧೋಳದ ಪರಶುರಾಮ ಕುಳಲಿ (54) ಹತ್ಯೆಯಾದ ವ್ಯಕ್ತಿ. ಮಗ ವಿಠಲ ಕುಳಲಿ (20) ತಂದೆಯನ್ನು ರಾಡ್​ನಿಂದ ಹೊಡೆದು ಕೊಲೆ ಮಾಡಿದ ಆರೋಪಿ. ಕುಡಿದ ಮತ್ತಲ್ಲಿ ತಂದೆ ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಡಿಸೆಂಬರ್​ 6 ರಂದು ಮದ್ಯಪಾನ ಮಾಡಿದ್ದ ಮಗನಿಗೆ ಪರಶುರಾಮ ಬೈದು, ಎರಡೇಟು ಹೊಡೆದು ಬುದ್ಧಿವಾದ ಹೇಳಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ವಿಠಲ ತಂದೆಗೆ ರಾಡ್​ನಿಂದ ಹೊಡೆದು ಹತ್ಯೆ ಮಾಡಿದ್ದಾನೆ.

ಬಳಿಕ ತಂದೆ ಶವವನ್ನು ಎಸೆಯಲು ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿಯಿರುವ ತಮ್ಮ ಹೊಲಕ್ಕೆ ಹೋಗಿದ್ದಾನೆ. ಹೊಲದಲ್ಲಿನ ಬೋರ್​ವೆಲ್​ನಲ್ಲಿ ತಂದೆ ಶವ ಹಾಕಲು ಪ್ರಯತ್ನಿಸಿದ್ದಾನೆ. ಆದ್ರೆ ಅದು ಒಳಕ್ಕೆ ಹೋಗಿಲ್ಲ. ಹೀಗಾಗಿ ಕೊಡಲಿ ತೆಗೆದುಕೊಂಡು ಶವವನ್ನು 30ಕ್ಕೂ ಹೆಚ್ಚು ತುಂಡುಗಳನ್ನಾಗಿ ಮಾಡಿ ನಂತರ ಕೊಳವೆ ಬಾವಿಯೊಳಕ್ಕೆ ಹಾಕಿದ್ದಾನೆ.

ಸದ್ಯ ಕೊಲೆ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಕೊಳವೆ ಬಾವಿಯಲ್ಲಿ ಶವದ ತುಂಡುಗಳನ್ನು ಜೆಸಿಬಿ ಹಾಗೂ ಹಿಟಾಚಿಯಿಂದ ಹೊರ ತೆಗೆಯಲಾಗುತ್ತಿದೆ. ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿಠಲನನ್ನು ಬಂಧಿಸಲಾಗಿದೆ.


Spread the love

About Laxminews 24x7

Check Also

ಪ್ರಧಾನಿ ಮೋದಿ ಒಂದು ದಿನ ತಮ್ಮ ಕೃತ್ಯಗಳಿಗೆ ಪಶ್ಚಾತ್ತಾಪ ಪಡುತ್ತಾರೆ: ಮಲ್ಲಿಕಾರ್ಜುನ ಖರ್ಗೆ

Spread the loveಕಲಬುರಗಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುವಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ