Breaking News

ಆವರಗೆರೆಯಲ್ಲಿ ಹೊರರೋಗಿಗಳ ಸೇವೆಗೆ ‘ನಮ್ಮ ಕ್ಲಿನಿಕ್‌’

Spread the love

ದಾವಣಗೆರೆ : ನಗರದೊಳಗಿನ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಸುಲಭದಲ್ಲಿ ಸಿಗುವಂತಾಗಲು ‘ನಮ್ಮ ಕ್ಲಿನಿಕ್‌’ ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ದಾವಣಗೆರೆಯ ಆವರಗೆರೆಯಲ್ಲಿ ಜಿಲ್ಲೆಯ ಮೊದಲ ‘ನಮ್ಮ ಕ್ಲಿನಿಕ್‌’ ಉದ್ಘಾಟನೆಗೆ ಸಿದ್ಧವಾಗಿದೆ.

ಎಂಬಿಬಿಎಸ್‌ ವೈದ್ಯರು ಒಬ್ಬರು, ಶುಶ್ರುಷಕರೊಬ್ಬರು, ಲ್ಯಾಬ್‌ ಟೆಕ್ನಿಷಿಯನ್‌ ಒಬ್ಬರು, ಡಿ ಗ್ರೂಪ್‌ ನೌಕರರೊಬ್ಬರು ಒಟ್ಟು ನಾಲ್ವರು ಈ ‘ನಮ್ಮ ಕ್ಲಿನಿಕ್‌’ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಸೋಮವಾರದಿಂದ ಶನಿವಾರದ ವರೆಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ, ಮಧ್ಯಾಹ್ನ 1.45ರಿಂದ ಸಂಜೆ 4.30ರವರೆಗೆ ಈ ಕ್ಲಿನಿಕ್‌ ತೆರೆದಿರಲಿದೆ.

ಗರ್ಭಿಣಿ ಹಾರೈಕೆ, ಶಿಶುವಿನ ಹಾರೈಕೆ, ಮಕ್ಕಳ ಸೇವೆ, ಕುಟುಂಬ ಕಲ್ಯಾಣ ಸೇವೆ, ಸಾಂಕ್ರಮಿಕ ರೋಗಗಳ ನಿರ್ವಹಣೆ, ಸಂಪೂರ್ಣ ಒಪಿಡಿ ಸೇವೆ, ಮಧುಮೇಹ, ರಕ್ತದೊತ್ತಡ ತಪಾಸಣೆ, ಕ್ಯಾನ್ಸರ್‌ ಸ್ಕ್ರೀನಿಂಗ್‌, ಬಾಯಿ ಆರೋಗ್ಯ ಸಮಸ್ಯೆಗಳ ತಪಾಸಣೆ, ಕಣ್ಣಿನ ತಪಾಸಣೆ, ಮೂಗು, ಕಿವಿ, ಗಂಟಲು ತಪಾಸಣೆ, ಮಾನಸಿಕ ಆರೋಗ್ಯ ಸ್ಕ್ರೀನಿಂಗ್‌ ಸೇವೆ, ವೃದ್ದಾಪ್ಯ ಆರೈಕೆ, ತುರ್ತು ವೈದ್ಯಕೀಯ ಸೇವೆಗಳೆಲ್ಲ ಈ ಕ್ಲಿನಿಕ್‌ನಲ್ಲಿ ದೊರೆಯಲಿವೆ.

ಚಿಕಿತ್ಸೆ ಜೊತೆಗೆ ಪ್ರಯೋಗಾಲಯದ ಸೇವೆ ಹಾಗೂ ಔಷಧ ಉಚಿತವಾಗಿ ದೊರೆಯಲಿದೆ. 14 ಮಾದರಿಯ ಪರೀಕ್ಷೆಗಳು ಒಳಗೊಂಡಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ