Breaking News

ಕನ್ನಡದ ಮಕ್ಕಳು ಉದ್ಯಮಿಗಳಾಗಬೇಕು: C.M. ಬೊಮ್ಮಾಯಿ

Spread the love

ಬೆಂಗಳೂರು, ಡಿಸೆಂಬರ್ 10 : ರುಡ್ ಸೆಟ್ ನಂತಹ ಉತ್ತಮ ತರಬೇತಿ ಕೇಂದ್ರದಿಂದ ಕರ್ನಾಟಕದ ಮಕ್ಕಳು ಲಾಭವನ್ನು ಪಡೆದು, ಉದ್ಯಮಿಗಳಾಗಿ, ಇತರರಿಗೆ ಉದ್ಯೋಗ ನೀಡುವಂತಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶನಿವಾರ ರುಡ್‍ಸೆಟ್ ರಾಷ್ಟ್ರೀಯ ಅಕಾಡೆಮಿ ಹಾಗೂ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪ್ರಯೋಜಕತ್ವದಲ್ಲಿ ಆಯೋಜಿಸಿರುವ “ರುಡ್‍ಸೆಟ್ ರಾಷ್ಟ್ರೀಯ ಅಕಾಡೆಮಿಯ ನೂತನ ಕಟ್ಟಡ”ದ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪ್ರಧಾನ ಮಂತ್ರಿಗಳು ಕೌಶಲ್ಯ ಭಾರತದಡಿ ಶೇ 44 ರಷ್ಟಿರುವ ಯುವಕರಿಗೆ ಕೌಶಲ್ಯ ತರಬೇತಿ ಯನ್ನು ನೀಡಿ, ಎಲ್ಲಾ ಉದ್ಯೋಗಕ್ಕೆ ಅರ್ಹತೆ ಗಳಿಸಿಕೊಳ್ಳಲು ನೆರವು ಒದಗಿಸುತ್ತಿದ್ದಾರೆ.

ಸಣ್ಣ ಕೆಲಸದಿಂದ ಹಿಡಿದು ಆರ್.ಅಂಡ್ ಡಿ ವರೆಗೆ ಕೌಶಲ್ಯ ಅಗತ್ಯ. ಕರ್ನಾಟಕ ಕೌಶಲ್ಯ ಹಾಗೂ ಮಾನವ ಬಂಡವಾಳದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಬೇಕು. ಇದನ್ನು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಸಿ, ಕರ್ನಾಟಕ ವನ್ನು ಕಟ್ಟಲು ಬಳಕೆ ಮಾಡುತ್ತೇವೆ.. ಇದರ ಮೂಲಕ ನವ ಕರ್ನಾಟಕದಿಂದ ನವಭಾರತ ನಿರ್ಮಿಸೋಣ ಎಂದರು.


Spread the love

About Laxminews 24x7

Check Also

ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ! 6 ಬಾರಿ ತಲಾಖ್, ಅಬಾರ್ಷನ್

Spread the loveಬೆಂಗಳೂರು, ಜುಲೈ 1: ಗಂಡನಾದವನೇ ಹೆಂಡತಿಯನ್ನು ಬೇರೆಯವರ ಜತೆ ಮಲಗುವಂತೆ ಪೀಡಿಸಿದರೆ, ಅದಕ್ಕಾಗಿ ಹಿಂಸಿಸಿದರೆ ಮಹಿಳೆಯ ಸ್ಥಿತಿ ಹೇಗಾಗಬಹುದು! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ