ಅದು ಉತ್ತರ ಕರ್ನಾಟಕದ ಜನರಿಗೆ ಜೀವನಾಡಿ ಆಗಬೇಕಿದ್ದ ಸಾರಿಗೆ ಸಂಸ್ಥೆ. ಆದರೆ ಒಂದಿಲ್ಲೊಂದು ರೀತಿಯಲ್ಲಿ ಜನರ ಜೀವ ಹಿಂಡಲು ಮುಂದಾಗಿದೆ. ದಿನದಿಂದ ದಿನಕ್ಕೆ ಜನದಟ್ಟಣೆ, ಜನರ ಸಂಚಾರ ಹೆಚ್ಚಾಗುತ್ತಿದೆ. ಜನರಿಗೆ ಅವಶ್ಯಕ ಇರುವ ಸಂದರ್ಭದಲ್ಲಿಯೇ ಸಾರಿಗೆ ಸಂಸ್ಥೆ ಬೇರೆ ಬೇರೆ ನೆಪವೊಡ್ಡಿ ಆಟ ಆಡುತ್ತಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ದಿನದಿಂದ ದಿನಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಳ್ಳುವುದು ಮಾತ್ರವಲ್ಲದೆ ಜನಜೀವನದ ಜೊತೆಗೆ ಆಟವಾಡುತ್ತಿದೆ. ರಸ್ತೆಗೆ ಇಳಿದು ಸಂಚಾರ ಸೇವೆ ಸಲ್ಲಿಸಬೇಕಿದ್ದ ಬಸ್ಸುಗಳು ಈಗ ಡಿಪೋದಲ್ಲಿಯೇ ನಿಂತುಕೊಂಡಿದ್ದು, ಜನರು ಬಸ್ಸಿನ ಸೇವೆ ಸಿಗದೇ ಪರದಾಡುವಂತಾಗಿದೆ. ಹೌದು.. ಬಸ್ಸಿಗೆ ಡೀಸೆಲ್ ಹಾಕಲು ಸಂಸ್ಥೆಯ ಬಳಿ ಹಣವಿಲ್ಲ. ಡಿಸೇಲ್ಗಳಿಲ್ಲದೇ ಮುಂದೆ ಹೋಗಲು ಆಗದೇ ನೂರಾರು ಬಸ್ಸುಗಳು ಡಿಪೋದಲ್ಲಿ ನಿಂತಿವೆ. ಬಸ್ಗಳಿಲ್ಲದ ಪ್ರಯಾಣಿಕ ಪರದಾಡುತ್ತಿದ್ದಾರೆ. ಹೀಗಿದ್ದರೂ ಕೂಡ ಸಾರಿಗೆ ಸಂಸ್ಥೆ ಕಿಂಚಿತ್ತೂ ಕಾಳಜಿ ವಹಿಸಿದೆ ಬೇಕಾಬಿಟ್ಟಿಯಾಗಿ ವರ್ತಿಸುತ್ತಿವೆ.
ಇನ್ನೂ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಜೀವನಾಡಿ. ಒಂಬತ್ತು ವಿಭಾಗಗಳನ್ನ ಹೊಂದಿರುವ ಸಂಸ್ಥೆಯಲ್ಲಿ ಹಣವಿಲ್ಲ. ಈಗಾಗಲೇ ಸಿಬ್ಬಂದಿಗಳ ವೇತನ ನೀಡಲು ಹೆಣಗಾಡುತ್ತಿರುವ ಸಂಸ್ಥೆ, ಈಗ ಬಸ್ಗಳಿಗೆ ಡಿಸೇಲ್ಗಳ ಹಾಕಲು ಸಂಸ್ಥೆ ಖಜಾನೆ ಖಾಲಿಯಾಗಿದೆ. ಆದರೂ ಸಾರಿಗೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.
Laxmi News 24×7