ನಮ್ಮನ್ನೂ ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಎಂದು ಮಹಾರಾಷ್ಟçಕ್ಕೆ ಮನವಿ ಸಲ್ಲಿಸಿ ಮಹಾರಾಷ್ಟçದ ಕೆಂಗಣ್ಣಿಗೆ ಗುರಿಯಾಗಿರುವ ಅಕ್ಕಲಕೋಟ ತಾಲೂಕಿನ ಕನ್ನಡಿಗರು ಯಾವದೇ ಬೆದರಿಕೆಗೆ ಬಗ್ಗದೆ ಪ್ರಾಣ ಹೋದರು ಸರಿ ತಮ್ಮ ನಿಲುವಿಗೆ ಬದ್ಧರಾಗಿದದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಭಿವೃದ್ಧಿ ವಂಚಿತ ಗ್ರಾಮಗಳ ಕನ್ನಡಿಗರು ಮಾಜಿ ಶಾಸಕರ ಸಮ್ಮುಖದಲ್ಲಿ ಅಕ್ಕಲಕೋಟ ತಾಲೂಕಿನ ತಡವಳ ಗ್ರಾಮದಲ್ಲಿ ಸಭೆ ಸೇರಿ ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಕರ್ನಾಟಕಕ್ಕೆ ಸೇರಿಸಿ ಎಂದು ೧೧ ಗ್ರಾಮ ಪಂಚಾಯತಿಗಳು ಠರಾವು ಮಂಡಿಸಿದ ಬೆನ್ನಲ್ಲೇ ಚುನಾಯಿತ ಮಂಡಳಿ ವಿಸರ್ಜನೆ ಮಾಡುವ ಬೆದರಿಕೆಯನ್ನು ಮಹಾರಾಷ್ಟ್ರ ಸರ್ಕಾರ ಹಾಕಿದೆ. ನಮ್ಮನ್ನು ಗಲ್ಲಿಗೇರಿಸಿದರೂ ಸರಿ ನಮ್ಮ ನಿರ್ಧಾರ ಅಚಲ ಎಂದು ಸಭೆಯಲ್ಲಿ ಅಳಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾಂತೇಶ ಹತ್ತೂರೆ ಸ್ಪಷ್ಟವಾಗಿ ಹೇಳಿದರು.
ಅಭಿವೃದ್ಧಿ ಮಾಡದಿದ್ದರೆ ನಾವು ಕರ್ನಾಟಕಕ್ಕೆ ಹೋಗಿಯೇ ಹೋಗ್ತಿವಿ ಎಂದು ಸಂದೇಶ ರವಾನೆ ಮಾಡಿದ್ದು ಈ ಕುರಿತು ಸೊಲ್ಲಾಪುರ ಜಿಲ್ಲಾಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಲಾಯಿತು.
Laxmi News 24×7