ಸತ್ತು ಹೋಗಿರುವ ಎಮ್.ಇ.ಎಸ್ ಗೆ ಮರು ಜೀವ ತುಂಬಲು ಮರಾಠಿ ಪುಂಡರಿಗೆ ಪುಷ್ಟಿ ಕೊಡಲಾಗುತ್ತಿದೆ ಎಂದು ಮಾಜಿ ಉಪ ಮುಖ್ಯ ಮಂತ್ರಿ , ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ರಾಜಕೀಯ ಲಾಭಕ್ಕಾಗಿ ಗಡಿ ವಿವಾದವನ್ನು ಬಳಸಿಕೊಳ್ಳಲಾಗುತ್ತಿದೆ ಎಂದ
ಅವರು ಈಗಾಗಲೇ ಗಡಿ ವಿವಾದ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಮರಾಠ ಸಮಾಜ ಭಾರತೀಯ ಜನತಾ ಪಕ್ಷದ ಜೊತೆಗಿದೆ ಎಂದರು
. ಈ ಬಾರಿಯ ಚುನಾವಣೆಯಲ್ಲಿ ಮರಾಠ ಸಮಾಜದ ಮತದಾರರು ಇರುವ ಪ್ರದೇಶಗಳಲ್ಲಿ ಬಹುಮತ ಪಡೆದು ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಶೂನ್ಯ ಸಂಪಾದನೆ ಮಾಡಿಕೊಡಲಾಗುವದು ಎಂದರು.
Laxmi News 24×7